ಸಲಿಂಗಕಾಮಿ ಎಂದಿರುವ ದ್ಯುತಿ ಚಾಂದ್‌ ಬಗ್ಗೆ ಹಿರಿಯ ಸಹೋದರಿ ಹೇಳಿದ್ದೇನು..?

ಆಸ್ತಿ ಮತ್ತು ಬೆಳವಣಿಗೆ ಸಹಿಸದವರ ತೀವ್ರ ಒತ್ತಡ ಹಾಗೂ ಬ್ಲ್ಯಾಕ್‌ಮೇಲ್‌ಗೆ ಮಣಿದು ನನ್ನ ಸಹೋದರಿ ಈ ರೀತಿ ಹೇಳಿಕೆ ನೀಡಿದ್ದಾಳೆ ಎಂದು ತಿಳಿಸಿದ್ದಾರೆ.
ದ್ಯುತಿ ಚಾಂದ್
ದ್ಯುತಿ ಚಾಂದ್
ಜೈಪುರ: ಭಾರತದ ವೇಗದ ಓಟಗಾರ್ತಿ ದ್ಯುತಿ ಚಾಂದ್‌ ತಾವು ಸಲಿಂಗಕಾಮಿ ಎನ್ನುವುದನ್ನು ಬಹಿರಂಗಪಡಿಸಿರುವುದನ್ನು ಆಕೆಯ ಹಿರಿಯ ಸಹೋದರಿ ಅಲ್ಲಗಳೆದಿದ್ದು, ಆಸ್ತಿ ಮತ್ತು ಬೆಳವಣಿಗೆ ಸಹಿಸದವರ ತೀವ್ರ ಒತ್ತಡ ಹಾಗೂ ಬ್ಲ್ಯಾಕ್‌ಮೇಲ್‌ಗೆ ಮಣಿದು ನನ್ನ ಸಹೋದರಿ ಈ ರೀತಿ ಹೇಳಿಕೆ ನೀಡಿದ್ದಾಳೆ ಎಂದು ತಿಳಿಸಿದ್ದಾರೆ. 
ದ್ಯುತಿ ಚಾಂದ್‌ ಅವರ ಜೀವನ ಹಾಗೂ ಅವರ ಆಸ್ತಿ ಅಪಾಯದಲ್ಲಿದೆ. ಹಾಗಾಗಿ, ರಕ್ಷಣೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ದ್ಯುತಿ ಚಾಂದ್‌ 100 ಮೀ ದಾಖಲೆಯ ಓಟಗಾರ್ತಿಯಾಗಿದ್ದು, ಅವರು ನಿನ್ನೆಯಷ್ಟೆ ತಾವು ಸಲಿಂಗಕಾಮಿ ಎಂದು ಹೇಳಿಕೊಂಡಿದ್ದರು. ಚಾಂದ್‌ ಅವರ ಹಿರಿಯ ಸಹೋದರಿ ಸರಸ್ವತಿ ಕೂಡ ಅಥ್ಲಿಟ್‌ ಆಗಿದ್ದಾರೆ.
 ಕುಟುಂಬದ ಸಹಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರಸ್ವತಿ, “ದ್ಯುತಿ ಇನ್ನೂ ವಯಸ್ಕಳು. ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗುವುದು ಆಕೆಗೆ ಬಿಟ್ಟಿದ್ದು, ಆದರೆ, ಯಾರದೋ ಒತ್ತಡಕ್ಕೆ ಮಣಿದು ನಾನು ಸಲಿಂಗ ಕಾಮಿ ಎಂದು ಹೇಳಿಕೊಂಡಿದ್ದಾರಷ್ಟೆ. ಮದುವೆ ಬಗ್ಗೆ ನಿರ್ಧಾರ ತಡವಾಗಿ ಚರ್ಚಿಸುತ್ತೇವೆ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಹಿಸದವರು ಈ ರೀತಿ ಒತ್ತಡ ಹೇರುತ್ತಿದ್ದಾರೆ. ಕ್ರೀಡೆಯಿಂದ ಸಂಪೂರ್ಣವಾಗಿ ದೂರ ಸರಿಸುವ ಹಾಗೂ ಅವರ ಕೆಟ್ಟ  ಹೆಸರು ತರುವ ಉದ್ದೇಶದಿಂದ ಇಂಥ ಕೃತ್ಯಗಳನ್ನು ಎಸಗುತ್ತಿದ್ದಾರೆ. 2020ರ ಒಲಿಂಪಿಕ್‌ ಸಿದ್ಧತೆಯಲ್ಲಿರುವ ದ್ಯುತಿ ಚಾಂದ್‌ಗೆ ಸರ್ಕಾರ ಸೂಕ್ತ ಸ್ಪಂದನೆ ಸಹಕಾರ ನೀಡುತ್ತಿದೆ” ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com