ಡೋಪ್ ಟೆಸ್ಟ್ ನಲ್ಲಿ ಸಿಕ್ಕಿ ಬಿದ್ದ ಏಷ್ಯನ್ ಚಾಂಪಿಯನ್ ಷಿಪ್ ವಿನ್ನರ್ ಗೋಮತಿ

ಭಾರತದ ಅಥ್ಲೀಟ್‌ ಗೋಮತಿ ಮಾರಿಮುತ್ತು ಅವರು ನಿಷೇಧಿತ ಉದ್ದೀಪನಾ ಮದ್ದು ಸೇವನಾ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತದ ಅಥ್ಲೀಟ್‌ ಗೋಮತಿ ಮಾರಿಮುತ್ತು ಅವರು ನಿಷೇಧಿತ ಉದ್ದೀಪನಾ ಮದ್ದು ಸೇವನಾ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. 
30 ವರ್ಷದ ತಮಿಳುನಾಡು ಮೂಲದ ಅಥ್ಲೀಟ್ ಗೋಮತಿ ನಾಡಾ ನಡೆಸಿದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದಿದ್ದಾರೆ. ಮಧುಮತಿ ಅವರಿಂದ ಪರೀಕ್ಷೆಗಾಗಿ ಪಡೆಯಲಾಗಿದ್ದ ರಕ್ತದಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶವಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ವೈದ್ಯರು ಸಂಗ್ರಹಿಸಿರುವ ಎ ಸ್ಯಾಂಪಲ್ ಪಾಸಿಟಿವ್ ಎಂದು ತಿಳಿದುಬಂದಿದ್ದು, ಬಿ ಸ್ಯಾಂಪಲ್ ನಲ್ಲೂ ಪಾಸಿಟಿವ್ ಎಂದು ಬಂದರೇ ಗೋಮತಿ ಅವರಿಗೆ 4 ವರ್ಷಗಳ ನಿಷೇಧದ ಕಠಿಣ ಶಿಕ್ಷೆ ನೀಡುವ ಸಾಧ್ಯತೆ ಇದೆ. ಇದು ಗೋಮತಿ ಅವರ ಮೊದಲ ಡೋಪಿಂಗ್ ತಪ್ಪು ಎನ್ನಲಾಗಿದೆ.
ಕಳೆದ ತಿಂಗಳು ದೋಹಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ ನ ಮಹಿಳೆಯರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪ್ರಸ್ತುತ ಭಾರತದ ಅಥ್ಲೀಟ್‌ ಗಳು ಪೋಲೆಂಡ್ ನ ಸ್ಪಾಲಾದಲ್ಲಿ ತರಬೇತಿ ಪಡೆಯುತ್ತಿದ್ದು, 30 ವರ್ಷ ವಯಸ್ಸಿನ ಗೋಮತಿ ಈಗ ಶಿಬಿರದಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ.
ಈ ಬಗ್ಗೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು, ಗೋಮತಿ ರಕ್ತದಲ್ಲಿ ಸ್ಟಿರಾಯ್ಡ್ ಅಂಶ ಪತ್ತೆಯಾಗಿದೆ. ಪ್ರಸ್ತುತ ಈ ವರದಿ ನಮ್ಮ ಕೈ ಸೇರಬೇಕಿದ್ದು, ವರದಿ ಕೈಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com