ಇಂಡಿಯಾ ಓಪನ್ ಬಾಕ್ಸಿಂಗ್: ಸೆಮಿಫೈನ್ಲ್ ಪ್ರವೇಶಿಸಿ ಪದಕ ಖಾತ್ರಿಪಡಿಸಿದ ಮೇರಿ ಕೋಂ

ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಂ ಎರಡನೇ ಆವೃತ್ತಿಯ ಇಂಡಿಯನ್ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸೆಮಿಫೈನಲ್....

Published: 22nd May 2019 12:00 PM  |   Last Updated: 22nd May 2019 01:05 AM   |  A+A-


Mary Kom wins first bout at India Open boxing tournament, assured of medal

ಇಂಡಿಯಾ ಓಪನ್ ಬಾಕ್ಸಿಂಗ್: ಸೆಮಿಫೈನ್ಲ್ ಪ್ರವೇಶಿಸಿ ಪದಕ ಖಾತ್ರಿಪಡಿಸಿದ ಮೇರಿ ಕೋಂ

Posted By : RHN RHN
Source : The New Indian Express
ಗುವಾಹಟಿ: ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಂ ಎರಡನೇ ಆವೃತ್ತಿಯ ಇಂಡಿಯನ್ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಈ ಮೂಲಕ ತಾವು ಪದಕ ಗಳಿಕೆಯನ್ನು ಖಚಿತ ಮಾಡಿಕೊಂಡಿದ್ದಾರೆ.

ಪಂದ್ಯಾವಳಿಯ ಎರಡನೇ ದಿನವಾದ ಮಂಗಳವಾರ ಮಹಿಳೆಯರ 51ಕೆಜಿ ವಿಭಾಗದಲ್ಲಿ ಪಾಳದ ಮಾಲಾ ರೈ ವಿರುದ್ಧ 5-0  ಅಂತರದಿಂದ ಮೇರಿ ಜಯ ಸಾಧಿಸಿದ್ದಾರೆ.

ವಿಶೇಷವೆಂದರೆ ಮೇರಿ ಎದುರಾಳಿ ನೇಪಾಳದ ಆಟಗಾರ್ತಿ ತಾನು ಸೋತ ನಂತರ ಯಾವುದೇ ನಿರಾಶೆ, ಬೇಸರ ವ್ಯಕ್ತಪಡಿಸುವ ಬದಲು ಭಾರತದ ಆಟಗಾರ್ತಿಯನ್ನು ಆಲಂಗಿಸಿಕೊಂಡು ಕ್ರೀಡಾಸ್ಪೂರ್ತಿಯನ್ನು ಮೆರೆದಿದ್ದಾರೆ.

ಇನ್ನು ಸೆಮಿಫೈನಲ್ ನಲ್ಲಿ ಮೇರಿಗೆ ಭಾರತದವರೇ ಆದ ನಿಖತ್‌ ಜರೀನ್‌ ಎದುರಾಲಿಯಾಗಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಭಾರತದ ಸರಿತಾ ದೇವಿ ೬೦ ಕೆಜಿ ವಿಭಾಗದಲ್ಲಿ ಸೆಮೀಸ್ ಪ್ರವೇಶಿಸಿದ್ದು ತಾವು ಸಹ ಪದಕ ಕಾತ್ರಿ ಪಡಿಸಿಕೊಂಡಿದ್ದಾರೆ. ಇನ್ನುಳಿದಂತೆ ಭಾರತದ ಮಂಜು ರಾಣಿ, ಮೋನಿಕಾ, ಮೀನಾ ಕುಮಾರಿ, ಜ್ಯೋತಿ ಗುಲಿಯಾಸಹ ಸೆಮೀಸ್ ಪ್ರವೇಶಿಸ್ದ್ದಾರೆ. ಪುರುಷರ ವಿಭಾಗದಲ್ಲಿ ಪವನ್‌ ನರ್ವಾಲ್‌, ಅಂಕಿತ್‌, ದಿನೇಶ್‌, ಆಶೀಶ್‌ ಹಾಗೂ ಮಂಜಿತ್‌ ಪಂಗಲ್‌ ಕ್ವಾರ್ಟರ್ ಫೈನಲ್ ಸುತ್ತಿಗೇರಿದ್ದಾರೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp