ಇಂಡಿಯಾ ಓಪನ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಸ್ವರ್ಣ ತ್ರಿಬಲ್: ಮೇರಿ ಕೋಮ್, ಸರಿತಾ, ಅಮಿತ್‌ಗೆ ಬಂಗಾರ

ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಮತ್ತು ಎಲ್. ಸರೀತಾ ದೇವಿ ಇಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವ ಗಳಿಸಿಕೊಂಡಿದ್ದಾರೆ.
ಮೇರಿ ಕೋಮ್
ಮೇರಿ ಕೋಮ್
ಗುವಾಹಟಿ: ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಮತ್ತು  ಎಲ್. ಸರೀತಾ ದೇವಿ ಇಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವ ಗಳಿಸಿಕೊಂಡಿದ್ದಾರೆ.
ಇನ್ನೊಂದೆಡೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅಮಿತ್ ಪಂಗಲ್ ಸಹ ಪುರುಷರ 52ಕೆಜಿ ವಿಭಾಗದಲ್ಲಿ ಸಚಿನ್ ಸಿವಚ್ ಅವರನ್ನು ಮಣಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ. ಅವರು 4-1ಅಂತರದಲ್ಲಿ ಸಚಿನ್ ಅವರನ್ನು ಸೋಲಿಸಿದ್ದರು.
ಪಂದ್ಯಾವಳಿಯಲ್ಲಿ ಭಾರತ ಒಟ್ಟಾರೆ ಪುರುಷ ಹಾಗೂ ಮಹಿಳಾ ವಿಭಾಗದ ನಾಲ್ಕು ಸ್ಪರ್ಧೆಗಳಲ್ಲಿ ಮೂರು ಚಿನ್ನದ ಪದಕ ಗಳಿಸಿದೆ. ಕಳೆದ ವರ್ಷ ನವದೆಹಲಿಯಲ್ಲಿನ ಮೊದಲ ಆವೃತ್ತಿಯಲ್ಲಿ  ಆರು ಚಿನ್ನದ ಪದಕಗಳನ್ನು ಪಡೆದಿದ್ದ ಭಾರತ, ಈ ಬಾರಿ ಅದರ ಅರ್ಧದಷ್ಟು ಮಾತ್ರ ಸಾಧನೆ ಮಾಡಿದೆ.
ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತರಾದ ಸರಿತಾ ದೇವಿ ಮೂರು ವರ್ಷದ ನಂತರ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ. ಸಿಮ್ರಾನ್ ಜಿತ್ ಕೌರ್ ಅವರನ್ನು 3-2  ಅಂತರದಲ್ಲಿ ಮಣಿಸಿದ್ದ ಸರಿತಾ ದೇವಿ ಈ ಸಾಧನೆ ಮಾಡಿದ್ದಾರೆ.
ಒಲಿಂಪಿಕ್ ಕಂಚಿನ ಪದಕ ವಿಜೇತ ಮೇರಿ ಕೋಮ್ ಮಿಜೋರಾಂನ ಮಾಜಿ ರಾಷ್ಟ್ರೀಯ ಚಾಂಪಿಯನ್ ವನ್ಲಾಲ್ ಡ್ಯೂಟಿ ಅವರನ್ನು 5-0  ಅಂತರದಲ್ಲಿ ಮಣಿಸಿ ಸ್ವರಣ ಪದಕ್ಕೆ ಭಾಜನರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com