ಸೋತರೂ ಮೂರನೇ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತ ವನಿತೆಯರು!

ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಎರಡನೇ ಪಂದ್ಯದಲ್ಲಿ ಸೋತರೂ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ. ಎರಡನೇ ಪಂದ್ಯದಲ್ಲಿ ಅಮೆರಿಕ ವಿರುದ್ಧ 4-1 ರಿಂದ ನಿರಾಸೆ ಅನುಭವಿಸಿದರೂ, ಎರಡೂ ಪಂದ್ಯಗಳ ಗೋಲುಗಳ ಲೆಕ್ಕಾಚಾರದ ಮೇಲೆ ಭಾರತ ಒಲಿಂಪಿಕ್ಸ್ ಗೆ ಪ್ರವೇಶಿಸಿದೆ.

Published: 02nd November 2019 09:28 PM  |   Last Updated: 02nd November 2019 09:28 PM   |  A+A-


India women hockey team

ಭಾರತ ಹಾಕಿ ವನಿತೆಯರ ತಂಡ

Posted By : Vishwanath S
Source : UNI

ಭುವನೇಶ್ವರ್: ಇಲ್ಲಿ ನಡೆದಿರುವ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಎರಡನೇ ಪಂದ್ಯದಲ್ಲಿ ಸೋತರೂ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ. ಎರಡನೇ ಪಂದ್ಯದಲ್ಲಿ ಅಮೆರಿಕ ವಿರುದ್ಧ 4-1 ರಿಂದ ನಿರಾಸೆ ಅನುಭವಿಸಿದರೂ, ಎರಡೂ ಪಂದ್ಯಗಳ ಗೋಲುಗಳ ಲೆಕ್ಕಾಚಾರದ ಮೇಲೆ ಭಾರತ ಒಲಿಂಪಿಕ್ಸ್ ಗೆ ಪ್ರವೇಶಿಸಿದೆ.

ಮೊದಲ ಪಂದ್ಯದಲ್ಲಿ ಭಾರತ 5-1ರಿಂಗೆ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಅಮೆರಿಕ 1-4 ರಿಂದ ಗೆದ್ದು ಬೀಗಿತು. ಎರಡೂ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಗೋಲುಗಳ ಲೆಕ್ಕಾಚಾರದ ಮೊರೆ ಹೊಗಲಾಯಿತು. ಅಂತಿಮವಾಗಿ ಭಾರತ 6-5 ರಿಂದ ಗೆಲುವು ದಾಖಲಿಸಿತು.

Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp