ಪ್ಯಾರಿಸ್ ಮಾಸ್ಟರ್ಸ್: ಸೆಮಿಫೈನಲ್ ತಲುಪಿದ ರಫೆಲ್ ನಡಾಲ್, ಜೊಕೊವಿಚ್

ವರ್ಷಾಂತ್ಯದಲ್ಲಿ ವಿಶ್ವ ಅಗ್ರ ಶ್ರೇಯಾಂಕದ ಹೋರಾಟದಲ್ಲಿರುವ ನೊವಾಕ್ ಜೊಕೊವಿಚ್ ಹಾಗೂ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಫೈನಲ್ ನಲ್ಲಿ ಇವರಿಬ್ಬರ ಕಾದಾಟಕ್ಕೆ ಇನ್ನೇನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ.
ರಾಫೆಲ್ ನಡಾಲ್
ರಾಫೆಲ್ ನಡಾಲ್

ಪ್ಯಾರಿಸ್: ವರ್ಷಾಂತ್ಯದಲ್ಲಿ ವಿಶ್ವ ಅಗ್ರ ಶ್ರೇಯಾಂಕದ ಹೋರಾಟದಲ್ಲಿರುವ ನೊವಾಕ್ ಜೊಕೊವಿಚ್ ಹಾಗೂ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಫೈನಲ್ ನಲ್ಲಿ ಇವರಿಬ್ಬರ ಕಾದಾಟಕ್ಕೆ ಇನ್ನೇನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ.

ಇಂದು ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸ್ಪೆನ್ ಆಟಗಾರ ನಡಾಲ್ 7-6 (7/4), 6-1 ಅಂತರದಲ್ಲಿ ಜೋ ವಿಲ್ಪ್ರೀಡ್ ಟಿಸೊಂಗಾ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ವೃತ್ತಿ ಜೀವನದ 36ನೇ ಮಾಸ್ಟರ್ಸ್ ಪ್ರಶಸ್ತಿ ಹಾದಿಯಲ್ಲಿರುವ ರಫೆಲ್ ನಡಾಲ್ ಉಪಾಂತ್ಯದಲ್ಲಿ ಡೆನಿಸ್ ಶಪೊವಲೋವ್ ವಿರುದ್ಧ ಕಾದಾಟ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com