ವಿಶ್ವ ಗೆದ್ದ ಬಾಕ್ಸರ್ ಮೇರಿ ಕೋಮ್‌ ಗೆ ಒಲಂಪಿಕ್ ಸಂಸ್ಥೆಯಿಂದ ‘OLY’ಗೌರವ

ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರಿಗೆ ವಿಶ್ವ ಒಲಿಂಪಿಯನ್ಸ್ ಅಸೋಸಿಯೇಷನ್ ​​(ಡಬ್ಲ್ಯುಒಎ) ತನ್ನ ವತಿಯಿಂದ  'OLY' (ಒಲಿಂಪಿಯನ್) ಗೌರವದ ಸ್ಥಾನಮಾನ ನೀಡಿದೆ.
ಮೇರಿ ಕೋಮ್
ಮೇರಿ ಕೋಮ್

ಗುವಾಹಟಿ: ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರಿಗೆ ವಿಶ್ವ ಒಲಿಂಪಿಯನ್ಸ್ ಅಸೋಸಿಯೇಷನ್ ​​(ಡಬ್ಲ್ಯುಒಎ) ತನ್ನ ವತಿಯಿಂದ  'OLY' (ಒಲಿಂಪಿಯನ್) ಗೌರವದ ಸ್ಥಾನಮಾನ ನೀಡಿದೆ.

ಮಣಿಪುರದ ಬಾಕ್ಸರ್‌ಗೆ ಡಬ್ಲ್ಯುಒಎ ಅಧ್ಯಕ್ಷ ಜೋಯಲ್ ಬೌಜೌ ಸಹಿ ಮಾಡಿರುವ OLY ಮಾನ್ಯತೆಯ ಪ್ರಮಾಣಪತ್ರವು ಸಿಕ್ಕಿದ್ದು ಒಲಿಂಪಿಯನ್ ಆಗಿ ನಿಮ್ಮ ಸಾಧನೆಯನ್ನು ಗುರುತಿಸಿದ್ದು ನಿಮ್ಮ ಹೆಸರಿನ ನಂತರ OLY ಗೌರವ ಸೂಚಕವನ್ನು ಬಳಸಲು  ಅನುಮತಿ ನೀಡಲಾಗಿದೆ, ಸಮಾಜದಲ್ಲಿ ನಿಮ್ಮ ಪ್ರಸ್ತುತ ಪಾತ್ರವನ್ನು ನೀವೊಬ್ಬ ಒಅಲಂಪಿಯನ್ ಆಗಿ ಉತ್ತಮ ಮೌಲ್ಯಗಳನ್ನಿಟ್ಟುಕೊಡು ಜೀವಿಸುತ್ತೀರಿ, ಇತರರಿಗೆ ಉತ್ತೇಜನ ನೀಡುತ್ತೀರಿ  ಎಂದು ಭಾವಿಸುತ್ತೇವೆ"  ಎಂದು ಬರೆಯಲಾಗಿದೆ.

ಇನ್ನು ಮೇರಿ ಕೋಮ್ ತಾವು ಸಹ ಈ ಸಂಬಂಧ ಟ್ವೀಟ್ ಮಾಡಿದ್ದು ತನ್ನನ್ನು OLY ಗೌರವಕ್ಕಾಗಿ ಆಯ್ಕೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದಿದ್ದಾರೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಂಟು ಪದಕಗಳನ್ನು (ಆರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು) ಗೆದ್ದ ವಿಶ್ವದ ಏಕೈಕ ಬಾಕ್ಸರ್ ಮ್ಯಾಗ್ನಿಫಿಸೆಂಟ್ ಮೇರಿ ಕೋಮ್ ಎಂಬುದು ಗಮನಾರ್ಹ. 

ಏನಿದು OLY ಗೌರವ?

ಒಅಲಂಪಿಕ್ ಕ್ರೀಡಾಕುಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಜಾಗತಿಕ ಒಲಿಂಪಿಯನ್ ಸಂಸ್ಥೆಯು ಹೆಸರಿನ ಜತೆಗೆ ನೀಡುವ ಗೌರವ ಸೂಚಕ ಪದವಿ ಇದು. ಈ ಗೌರವ ಹೊಂದಿದ ಕ್ರೀಡಾಪಟುಗಳು ತಮ್ಮ ಹೆಸರಿನ ಬಳಿಕ ಈ ವಿಷಿಷ್ಟ ಪಟ್ತವನ್ನು ಹೊಂದುವರು. ಅಲ್ಲದೆ ಸಮಾಜದಲ್ಲಿ ಒಲಂಪಿಕ್ ಮೌಲ್ಯವನ್ನು ಹೆಚ್ಚಿಸುವತ್ತ ಕೆಲಸ ಮಾಡಲು ಅರ್ಹರೆನಿಸಿಕೊಳ್ಲಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com