ಭಾರತದಲ್ಲಿ 2023ರ ಪುರುಷರ ಹಾಕಿ ವಿಶ್ವಕಪ್‌:4 ಬಾರಿ ಪಂದ್ಯಾವಳಿ ಆಯೋಜಿಸಿದ ಮೊದಲ ರಾಷ್ಟ್ರವೆಂಬ ಹೆಮ್ಮೆಯ ಗರಿ

2023ರ ಪುರುಷರ ಹಾಕಿ ವಿಶ್ವಕಪ್‌ ಅತಿಥ್ಯ ವಹಿಸಿಕೊಳ್ಳುವ ಅದ್ಭುತ ಅವಕಾಶ ಭಾರತದ ಪಾಲಿಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಶುಕ್ರವಾರ ಪ್ರಕಟಣೆಯಲ್ಲಿ ಹೇಳಿದೆ. ಈ ಮೂಲಕ ಭಾರತ ಸತತ ಎರಡನೇ ಬಾರಿಗೆ ಇಂತಹಾ ಅವಕಾಶ ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಾಸನ್ನೆ(ಸ್ವಿಡ್ಜರ್ ಲ್ಯಾಂಡ್): 2023ರ ಪುರುಷರ ಹಾಕಿ ವಿಶ್ವಕಪ್‌ ಅತಿಥ್ಯ ವಹಿಸಿಕೊಳ್ಳುವ ಅದ್ಭುತ ಅವಕಾಶ ಭಾರತದ ಪಾಲಿಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಶುಕ್ರವಾರ ಪ್ರಕಟಣೆಯಲ್ಲಿ ಹೇಳಿದೆ. ಈ ಮೂಲಕ ಭಾರತ ಸತತ ಎರಡನೇ ಬಾರಿಗೆ ಇಂತಹಾ ಅವಕಾಶ ಪಡೆದುಕೊಂಡಿದೆ.

ಪುರುಷರ ಹಾಕಿ ವಿಶ್ವಕಪ್ ಭಾರತದಲ್ಲಿ ಜನವರಿ 13 ರಿಂದ 29 2023ರವರೆಗೆ ನಡೆಯಲಿದೆ ಎಂದು ಎಫ್‌ಐಹೆಚ್ ಹೇಳಿದೆ.

ಈ ವರ್ಷದ ಕ್ಡೆಯ ಎಫ್‌ಐಎಚ್‌ನ ಸಭೆಯಲ್ಲಿ ಜುಲೈ 1 ರಿಂದ 22 ರವರೆಗೆ ನಡೆಯಲಿರುವ 2022 ರ ಮಹಿಳಾ ವಿಶ್ವಕಪ್‌ನ ಸಹ-ಆತಿಥೇಯರಾಗಿ ಸ್ಪೇನ್ ಮತ್ತು ನೆದರ್‌ಲ್ಯಾಂಡ್ಸ್ ಆಯ್ಕೆಯಾಗಿರುವುದಾಗಿ ಘೊಷಿಸಲಾಗಿದೆ.

ಇನ್ನು ಪಂದ್ಯ ನಡೆಯುವ ಸ್ಥಳಗಳನ್ನು ಆಯಾ ಆತಿಥೇಯ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಘೋಷಿಸಲಿವೆ.

ಈ ಮುನ್ನ 1982 (ಮುಂಬೈ), 2010 (ನವದೆಹಲಿ) ಮತ್ತು 2018 (ಭುವನೇಶ್ವರ) ದಲ್ಲಿ ಪುರುಷರ ಹಾಕಿ ವಿಶ್ವಕಪ್ ಆಯೋಜನೆಯಾಗಿತ್ತು. ಇದು ಭಾರತಕ್ಕೆ ಸಿಕ್ಕಿರುವ ನಾಲ್ಕನೇ ಅವಕಾಶವಾಗಿದೆ. ಹಾಗೆಯೇ ನಾಲ್ಕು ಬಾರಿ ಅತಿಥೇಯ ರಾಷ್ಟ್ರವಾಗಿ ಹಾಕಿ ವಿಶ್ವಕಪ್ ನಡೆಸಿದ ಮೊದಲ ದೇಶವೆಂದು ಭಾರತ ಗುರುತಿಸಿಕೊಂಡಿದೆ.

ಇನ್ನುಳಿದಂತೆ ನೆದರ್ಲ್ಯಾಂಡ್ಸ್ ಮೂರು ಪುರುಷರ ಪಂದ್ಯಾವಳಿಗಳನ್ನು ಆಯೋಜಿಸಿತ್ತು.

ಇನ್ನೊಂದು ಗಮನಾರ್ಹ ಸಂಗತಿ ಎಂದರೆ 2023ರಲ್ಲಿ ಭಾರತವು ಸ್ವಾತಂತ್ರ್ಯ ಹೊಂದಿ 75 ವಸಂತಗಳನ್ನು ಪೂರೈಸಲಿದೆ.ಆ ಸಂದರ್ಭದಲ್ಲಿ ದೇಶದ ಕ್ರೀಡಾ ಬೆಳವಣಿಗೆಯನ್ನು ಪ್ರದರ್ಶಿಸಲು ಹಾಕಿ ಇಂಡಿಯಾ ವಿಶ್ವಕಪ್ ಅನ್ನು ಆಯೋಜಿಸಲು ಬಯಸಿತು. ಪುರುಷರ ವಿಶ್ವಕಪ್‌ನ ಮುಂದಿನ ಆವೃತ್ತಿಯನ್ನು ಆಯೋಜಿಸಲುಭಾರತವಲ್ಲದೆ ಬೆಲ್ಜಿಯಂ ಮತ್ತು ಮಲೇಷ್ಯಾ ಗಳು ಬಿಡ್ ಸಲ್ಲಿಸಿದ್ದವು.ಮಹಿಳಾ ವಿಶ್ವಕಪ್‌ಗಾಗಿ ಜರ್ಮನಿ, ಸ್ಪೇನ್, ನೆದರ್‌ಲ್ಯಾಂಡ್ಸ್, ಮಲೇಷ್ಯಾ ಮತ್ತು ನ್ಯೂಜಿಲೆಂಡ್ ಬಿಡ್ ಸಲ್ಲಿಕೆ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com