ಶೂಟಿಂಗ್ ಚಾಂಪಿಯನ್‌ಶಿಪ್: ಫೈನಲ್ಸ್ ತಲುಪಿ ಒಲಿಂಪಿಕ್ಸ್  ಅರ್ಹತೆ ಗಿಟ್ಟಿಸಿದ ಚಿಂಕಿ ಯಾದವ್

ಶುಕ್ರವಾರ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಯುವ ಶೂಟರ್ ಚಿಂಕಿ ಯಾದವ್ ಬೆಳ್ಳಿ ಗೆದ್ದು, ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾರತ ಪಡೆದ 11ನೇ ಸ್ಥಾನವಾಗಿದೆ. 
ಚಿಂಕಿ ಯಾದವ್
ಚಿಂಕಿ ಯಾದವ್

ಧೋಹಾ: ಶುಕ್ರವಾರ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಯುವ ಶೂಟರ್ ಚಿಂಕಿ ಯಾದವ್ ಬೆಳ್ಳಿ ಗೆದ್ದು, ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾರತ ಪಡೆದ 11ನೇ ಸ್ಥಾನವಾಗಿದೆ.

ಚಿಂಕಿ ಅರ್ಹತೆಯಲ್ಲಿ 100 ರನ್ ಗಳಿಸಿ ಒಟ್ಟು 588 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅವರ ನಂತರ ಥೈಲ್ಯಾಂಡ್‌ನ ನಫ್ಸ್ವಾನ್ ಯಾಂಗ್‌ಪೆನ್‌ಬೂನ್ 590 ಅಂಕಗಳೊಂದಿಗೆ ಟೋಕಿಯೊಗೆ ಅರ್ಹತೆ ಪಡೆದಿದ್ದಾರೆ. 

21ರ ಹರೆಯದ ಚಿಂಕಿ ಫೈನಲ್ಸ್ ನಲ್ಲಿ ಎಂಟು ಸ್ಪರ್ಧಿಗಳೊಡನೆ ಕಣಕ್ಕಿಳಿಯಲಿದ್ದಾರೆ. 

ಈ ವರ್ಷಾರಂಭದಲ್ಲಿ ಮ್ಯೂನಿಚ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ರಾಹಿ ಸರ್ನೋಬತ್ ಪ್ರಥಮ ಜಯಗಳಿಸಿದ ನಂತರ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಇದು ದೇಶದ ಎರಡನೇ ಒಲಂಪಿಕ್ ಕೋತಾ ಆಗಿದೆ.

ಇನ್ನು ಕಣದಲ್ಲಿದ್ದ  ಇತರ ಭಾರತೀಯರಾದ ಅನು ರಾಜ್ ಸಿಂಗ್ (575) ಮತ್ತು ನೀರಜ್ ಕೌರ್ (572) ಕ್ರಮವಾಗಿ 21 ಮತ್ತು 27 ನೇ ಸ್ಥಾನ ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com