ಎಟಿಪಿ ಫೈನಲ್ಸ್ : ಫೆಡರರ್ ಗೆ ಸೋಲು, ಜೊಕೊವಿಚ್‍ಗೆ ಗೆಲುವು

ಎಟಿಪಿ ವಿಶ್ವ ಟೂರ್ ಫೈನಲ್ಸ್ ನ ಮೊದಲ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ರೋಜರ್ ಫೆಡರರ್ , ಡೋಮಿನಿಚ್ ಥೀಮ್ ವಿರುದ್ಧ ನೇರ ಸೆಟ್‍ಗಳಲ್ಲಿ ಸೋಲು ಅನುಭವಿಸಿದರು. 

Published: 11th November 2019 01:07 PM  |   Last Updated: 11th November 2019 01:07 PM   |  A+A-


RogerFederer1

ರೋಜರ್ ಫೆಡರರ್

Posted By : Nagaraja AB
Source : UNI

ಲಂಡನ್: ಎಟಿಪಿ ವಿಶ್ವ ಟೂರ್ ಫೈನಲ್ಸ್ ನ ಮೊದಲ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ರೋಜರ್ ಫೆಡರರ್ , ಡೋಮಿನಿಚ್ ಥೀಮ್ ವಿರುದ್ಧ ನೇರ ಸೆಟ್‍ಗಳಲ್ಲಿ ಸೋಲು ಅನುಭವಿಸಿದರು. 

ಮತ್ತೊಂದು ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ಅವರು ಇಟಲಿಯ ಮ್ಯಾಟ್ಟೊ ಬೆರ್ರೆಟ್ಟಿನಿ ವಿರುದ್ಧ ಗೆದ್ದು ಶುಭಾರಂಭ ಮಾಡಿದರು.

ಭಾನುವಾರ ನಡೆದ ಮೊದಲ ಗೇಮ್‍ಲ್ಲಿ ಎಡವಿದ ಫೆಡರರ್, 5-7, 5-7 ನೇರ ಸೆಟ್‍ಗಳಿಂದ ಆಸ್ಟ್ರೀಯಾದ ಥೀಮ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು. 

38ರ ಪ್ರಾಯದ ಸ್ವಿಸ್ ಆಟಗಾರ ಮೊದಲನೇ ಗೇಮ್ ಸೋಲು ಅನುಭವಿಸಿದ ಬಳಿಕ ಎಚ್ಚೆತ್ತುಕೊಂಡು 5-5 ಸಮಬಲ ಸಾಧಿಸಿದ್ದರು. ಈ ವೇಳೆ ಥೀಮ್ ಅವರ ಹಿಂಬದಿ ಹೊಡೆತಗಳನ್ನು ಎದುರಿಸುವಲ್ಲಿ ಫೆಡರರ್ ವಿಫಲರಾದರು. ಇದರ ಪರಿಣಾಮ ಆಸ್ಟ್ರೀಯಾ ಆಟಗಾರ 11 ಮತ್ತು 12 ಗೇಮ್ ಗಳಲ್ಲಿ ಗೆದ್ದು ಮೊದಲನೇ ಸೆಟ್ ಅನ್ನು 7-5 ಅಂತರದಲ್ಲಿ ತನ್ನದಾಗಿಸಿಕೊಂಡರು.

Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp