ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ಕೈಜೋಡಿಸಿದ ಬೆಂಗಳೂರು ಎಫ್‌ಸಿ!

ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ಸ್ ಜೊತೆ ಅಧಿಕೃತ ವೈದ್ಯಕೀಯ ಪಾಲುದಾರಿಯೊಂದಿಗೆ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಎಫ್‌ಸಿ ಈ ಬಾರಿ ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ಒಂದು ವರ್ಷದ ವೈದ್ಯಕೀಯ ಪಾಲುದಾರಿಕೆಗೆ ಸಹಿ ಹಾಕಿದೆ. 

ಈ ಒಪ್ಪಂದದ ಭಾಗವಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಎಲ್ಲಾ ಋತುವಿನಲ್ಲೂ ಬೆಂಗಳೂರಿನ ಎಫ್ ಸಿ ತಂಡದ ಎಲ್ಲಾ ಕ್ಲಬ್ ಪಂದ್ಯಗಳಿಗೆ ಆಂಬ್ಯುಲೆನ್ಸ್‌ಗಳನ್ನು ಒದಗಿಸುತ್ತದೆ. ಜೊತೆಗೆ ತಂಡಕ್ಕೆ ಮತ್ತು ವಯೋಮಾನದ ತಂಡಗಳಿಗೆ ವೈದ್ಯಕೀಯ ನೆರವು ನೀಡುತ್ತದೆ.

ನಗರ ಮತ್ತು ದೇಶದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಯಾವುದೇ ಕ್ರೀಡಾ ತಂಡದಲ್ಲಿ ಮತ್ತು ವಿಶೇಷವಾಗಿ ಬೆಂಗಳೂರು ಎಫ್‌ಸಿಯಲ್ಲಿ ವೈದ್ಯಕೀಯ ನೆರವು ಬಹಳ ಮುಖ್ಯವಾಗುತ್ತದೆ. ಅಲ್ಲಿ ನಾವು ಅಗ್ರ ತಂಡ ಮಾತ್ರವಲ್ಲದೆ ಅನೇಕ ವಯೋಮಾನದ ತಂಡಗಳನ್ನೂ ಹೊಂದಿದ್ದೇವೆ. ಇನ್ನು ನಾವು ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ದೀರ್ಘ ಮತ್ತು ಫಲಪ್ರದ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ ಎಂದು ಕ್ಲಬ್ ಸಿಇಒ ಮಂದಾರ್ ತಮ್ಹಾನೆ ಹೇಳಿದರು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಮಾತನಾಡಿದ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸಿಇಒ ಮತ್ತು ನಿರ್ದೇಶಕ ಡಾ.ನವೀನ್ ಥಾಮಸ್ ಅವರು ಐಎಸ್ಎಲ್ ಚಾಂಪಿಯನ್‌ಗಳೊಂದಿಗೆ ಕೈಜೋಡಿಸಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.

“ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿರುವ ನಾವೆಲ್ಲರೂ ತಮ್ಮ ಅಭಿಯಾನದಲ್ಲಿ ಬೆಂಗಳೂರು ಎಫ್‌ಸಿಗೆ ಸಹಾಯ ಮಾಡಲು ಸಾಧ್ಯವಾಯಿತು. ವೈದ್ಯಕೀಯ ನೆರವು ನೀಡುವುದಕ್ಕಿಂತ ಹೆಚ್ಚಾಗಿ, ನಮ್ಮ ಗಾಯ ತಡೆಗಟ್ಟುವ ವಿಧಾನಗಳು, ಕಾಯಿಲೆಗಳನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ಎಲ್ಲಾ ಋತುವಿನಲ್ಲೂ ಕ್ಲಬ್ ಅನ್ನು ಸದೃಢವಾಗಿರಿಸಲು ಸಹಾಯ ಮಾಡಲು ನಾವು ನೋಡುತ್ತಿದ್ದೇವೆ ಎಂದು ತಂಡಕ್ಕೆ ಶುಭ ಹಾರೈಸಿದರು. 

ನವೆಂಬರ್ 23ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com