19 ವರ್ಷಗಳಲ್ಲೇ ಮೊದಲ ಬಾರಿಗೆ ಅಗ್ರ 100ರ ಶ್ರೇಯಾಂಕದಿಂದ ಕುಸಿದ ಲಿಯಾಂಡರ್ ಪೇಸ್!

19 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತದ ಟೆನಿಸ್ ಪುರುಷರ ಡಬಲ್ಸ್‌ ಆಟಗಾರ ಲಿಯಾಂಡರ್ ಪೇಸ್ ಅವರು ಎಟಿಪಿ ಡಬಲ್ಸ್‌ ಶ್ರೇಯಾಂಕದ ಅಗ್ರ 100ರ ಪಟ್ಟಿಯಿಂದ ಹೊರ ಬಂದಿದ್ದಾರೆ.  
19 ವರ್ಷಗಳಲ್ಲೇ ಮೊದಲ ಬಾರಿಗೆ ಅಗ್ರ 100ರ ಶ್ರೇಯಾಂಕದಿಂದ ಕುಸಿದ ಲಿಯಾಂಡರ್ ಪೇಸ್!
19 ವರ್ಷಗಳಲ್ಲೇ ಮೊದಲ ಬಾರಿಗೆ ಅಗ್ರ 100ರ ಶ್ರೇಯಾಂಕದಿಂದ ಕುಸಿದ ಲಿಯಾಂಡರ್ ಪೇಸ್!

ನವದೆಹಲಿ: 19 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತದ ಟೆನಿಸ್ ಪುರುಷರ ಡಬಲ್ಸ್‌ ಆಟಗಾರ ಲಿಯಾಂಡರ್ ಪೇಸ್ ಅವರು ಎಟಿಪಿ ಡಬಲ್ಸ್‌ ಶ್ರೇಯಾಂಕದ ಅಗ್ರ 100ರ ಪಟ್ಟಿಯಿಂದ ಹೊರ ಬಂದಿದ್ದಾರೆ.  

ಸೋಮವಾರ ಬಿಡುಗಡೆಯಾದ ಶ್ರೇಯಾಂಕ ಪಟ್ಟಿಯಲ್ಲಿ ಲಿಯಾಂಡರ್ ಪೇಸ್ ಐದು ಸ್ಥಾನಗಳಲ್ಲಿ ಕುಸಿದು 101ನೇ ಶ್ರೇಯಾಂಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 

ತನ್ನ ಖಾತೆಯಲ್ಲಿ 856 ಅಂಕಗಳನ್ನು ಹೊಂದಿರುವ ಪೇಸ್, ಭಾರತದ ನಾಲ್ಕನೇ ಸ್ಥಾನದ ಆಟಗಾರ ಎಂದೆನಿಸಿಕೊಂಡಿದ್ದಾರೆ. ರೋಹನ್ ಬೋಪಣ್ಣ(38), ದಿವಿಜ್ ಶರಣ್(46) ಹಾಗೂ ಪುರವ್ ರಾಜಾ ಅಗ್ರ 100ಕ್ಕೆ ಲಗ್ಗೆ ಇಟ್ಟಿದ್ದು, 93ನೇ ಸ್ಥಾನ ಪಡೆದುಕೊಂಡಿದ್ದಾರೆ. 46ರ ಪ್ರಾಯದ ಲಿಯಾಂಡರ್ ಪೇಸ್ ಅವರು 2000 ಇಸವಿಯ ಅಕ್ಟೋಬರ್ ನಲ್ಲಿ 100ರಿಂದ ಹೊರ ನಡೆದು 118ನೇ ಸ್ಥಾನ ಪಡೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com