ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಐದು ಭಾರತೀಯ ಬಾಕ್ಸರ್ ಗಳಿಗೆ ಬಂಗಾರ 

ಮಂಗೋಲಿಯಾದ ಉಲಾನ್‌ಬತಾರ್‌ನಲ್ಲಿ ಭಾನುವಾರ ನಡೆದ ಎಎಸ್‌ಬಿಸಿ ಏಷ್ಯನ್ ಯೂತ್ ಪುರುಷ ಮತ್ತು ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬಾಕ್ಸರ್‌ಗಳು ಐದು ಚಿನ್ನದ ಪದಕಗಳನ್ನು  ಗಳಿಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಂಗೋಲಿಯಾದ ಉಲಾನ್‌ಬತಾರ್‌ನಲ್ಲಿ ಭಾನುವಾರ ನಡೆದ ಎಎಸ್‌ಬಿಸಿ ಏಷ್ಯನ್ ಯೂತ್ ಪುರುಷ ಮತ್ತು ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬಾಕ್ಸರ್‌ಗಳು ಐದು ಚಿನ್ನದ ಪದಕಗಳನ್ನು  ಗಳಿಸಿದರು.ಮಹಿಳಾ ವಿಭಾಗದಲ್ಲಿ ಐದು ಚಿನ್ನ ಗೆದ್ದರೆ ಮತ್ತು ಪುರುಷರು ಎರಡು ಬೆಳ್ಳಿ ಪದಕಗಳಿಗೆ  ತೃಪ್ತರಾಗಬೇಕಾಯಿತು. 

ಮಣಿಪುರ ಮೂಲದ ಬಾಬಿರೋಜಿಸಾನಾ ನೊರೆಮ್ ಚಾನು (51 ಕೆಜಿ) ಮತ್ತು ಸನಾಮಾಚಾ ಚಾನು ಥೋಕ್ಚೋಮ್ (75 ಕೆಜಿ) ವಿಂಕಾ (64 ಕೆಜಿ) ಮತ್ತು ಸುಷ್ಮಾ (81 ಕೆಜಿ) ಜೊತೆಗೆ ಹಿಸಾರ್‌ನ ಪೂನಂ (54 ಕೆಜಿ) ವಿಭಾಗದಲ್ಲಿ ಬಂಗಾರ ಪಡೆದರು. 

ಪುರುಷರಲ್ಲಿ ಸೆಲೆ ಸೋಯಾ (49 ಕೆಜಿ)  ಹಾಗೂ ಅಂಕಿತ್ ನಾರ್ವಾಲ್ 60 ಕೆಜಿ ವಿಭಾಗದಲ್ಲಿ  ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಬೆಳ್ಳಿ ಪದಕವನ್ನು ಪಡೆದುಕೊಂಡರು. 

ಅರುಂಧತಿ ಚೌದರಿ 69( ಕೆಜಿ) ಕಮಲ್ ಪ್ರೀತ್ ಕೌರ್ ( 81+ ಕೆಜಿ) ಜೈಸ್ಮೈನ್ 57 ( ಕೆಜಿ) ಸತೇಂದರ್ ಸಿಂಗ್ (91 ಕೆಜಿ) ಅಮನ್ ( 91+) ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com