ಕಜಕಿಸ್ತಾನ್ ರಾಜಧಾನಿಯಲ್ಲಿ  ಭಾರತ-ಪಾಕ್ ಡೇವಿಸ್ ಕಪ್

ಭಾರತ ಮತ್ತು ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯ ನವೆಂಬರ್ 29-30ರಂದು ಕಜಕಿಸ್ತಾನ್ ರಾಜಧಾನಿ ನೂರ್ ಸುಲ್ತಾನ್ ನಲ್ಲಿ ನಡೆಯಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯ ನವೆಂಬರ್ 29-30ರಂದು ಕಜಕಿಸ್ತಾನ್ ರಾಜಧಾನಿ ನೂರ್ ಸುಲ್ತಾನ್ ನಲ್ಲಿ ನಡೆಯಲಿದೆ.

ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನನಿಂದ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸುವಂತೆ ಭಾರತ ಕೇಳಿಕೊಂಡಿತ್ತು. ನಿಯಮಗಳಂತೆ ತಟಸ್ಥ ಸ್ಥಳದ ಆಯ್ಕೆ ಪಾಕ್ ಕೈಯಲ್ಲಿತ್ತು. ಆದರೆ, ತಟಸ್ಥ ಸ್ಥಳಕ್ಕೆ ವರ್ಗಾಯಿಸದನ್ನು ಪಾಕ್ ಖಂಡಿಸಿತ್ತು. ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಪಂದ್ಯವನ್ನು ನೂರ್ ಸುಲ್ತಾನ್‌ನಲ್ಲಿ ನಡೆಸಲು ಅಧಿಕೃತ ಪ್ರಕಟಣೆ ನೀಡಿದೆ.

ಗಾಯಾಳು ಬೋಪಣ್ಣ ಔಟ್

ಭುಜದ ಗಾಯದಿಂದ ಬಳಲುತ್ತಿರಿವ ರೋಹನ್ ಬೋಪಣ್ಣ ಅವರು ಮುಂದಿನ ಸಾಲಿನ ಡೇವಿಸ್ ಕಪ್ ಗೆ ಲಭ್ಯವಿರುವುದಿಲ್ಲ ಎಂದು ಅವರ ಕ್ಯಾಪ್ಟನ್ ರೋಹಿತ್ ರಾಜ್ಪಾಲ್ ಹೇಳಿದರು.

ಬೋಪಣ್ಣ ಬದಲಿಗೆ ಜೀವನ್ ನೆಡುಶೇಷಿಯಾನ್ ಅವರು ಲಿಯಾಂಡರ್ ಪೇಸ್ ಅವರಿಗೆ ಜತೆಯಾಗಲಿದ್ದಾರೆ.

ಇನ್ನೊಂದೆಡೆ ಅಗ್ರ ಸಿಂಗಲ್ಸ್ ಆಟಗಾರರಾದ ಸುಮಿತ್ ನಗಾಲ್ ಮತ್ತು ರಾಮ್‌ಕುಮಾರ್ ರಾಮನಾಥನ್ ತಂಡವನ್ನು ಮುನ್ನಡೆಸಲಿದ್ದಾರೆ.

ಪಂದ್ಯದಿಂದ ಪಾಕಿಸ್ತಾನದ ಐಸಮ್ ಹಿಂದಕ್ಕೆ

 ಪಾಕಿಸ್ತಾನ ಟೆನಿಸ್ ತಾರೆ ಐಸಮ್-ಉಲ್-ಹಕ್ ಖುರೇಷಿ ಅವರು ಭಾರತ ವಿರುದ್ಧದ ಡೇವಿಸ್ ಕಪ್ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಭಾರತೀಯ ಆಟಗಾರರ ಭದ್ರತಾ ವ್ಯವಸ್ಥೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ (ಐಟಿಎಫ್) ಪಾಕಿಸ್ತಾನ್ ದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ತಟಸ್ಥ ಸ್ಥಳಕ್ಕೆ ವರ್ಗಾಯಿಸಿತು.  ಇದರಿಂದಾಗಿ ಪಾಕ್ ಆಟಗಾರ ಕ್ರೀಡಾಕೂಟದಿಂದ ದೂರ ಸರಿಯಲು ತೀರ್ಮಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com