ವಿಶ್ವ ಚಾಂಪಿಯನ್ ಶಿಪ್ ಗೆಲುವು ನನ್ನ ಗುರಿ- ರಿತು ಪೋಗಟ್ 

ವಿಶ್ವ ಚಾಂಪಿಯನ್ ಶಿಪ್ ಗೆಲುವು ನನ್ನ ಗುರಿಯಾಗಿದೆ ಎಂದು ಭಾರತದ ಕುಸ್ತಿಪಟು ರಿತು ಪೋಗಟ್ ಹೇಳಿದ್ದಾರೆ.
ರಿತು ಪೋಗಟ್
ರಿತು ಪೋಗಟ್

ನವ ದೆಹಲಿ: ವಿಶ್ವ ಚಾಂಪಿಯನ್ ಶಿಪ್ ಗೆಲುವು ನನ್ನ ಗುರಿಯಾಗಿದೆ ಎಂದು ಭಾರತದ ಕುಸ್ತಿಪಟು ರಿತು ಪೋಗಟ್ ಹೇಳಿದ್ದಾರೆ.

 ಚೀನಾದ   ಬೀಜಿಂಗ್ ನಲ್ಲಿ ಮೊನ್ನೆ ನಡೆದ ಮಿಶ್ರ ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಶಿಫ್ ನಲ್ಲಿ ರಿತು ಪೋಗಟ್ ತಮ್ಮ ಪಾದಾರ್ಪಣೆಯ ಪಂದ್ಯದಲ್ಲಿಯೇ ಗೆಲುವು ಸಾಧಿಸಿದ್ದರು. 

ಈ ಗೆಲುವು ಕುರಿತಂತೆ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿರುವ ರಿತು ಪೋಗಟ್, ಮಿಶ್ರ ಮಾರ್ಷಲ್ ಆರ್ಟ್ಸ್ ನಲ್ಲಿ ಎದುರಾಳಿಯನ್ನು ಹಿಮ್ಮೆಟ್ಟಿಸಿ ಗೆಲುವು ಸಾಧಿಸುವುದು ಕಷ್ಟಕರವಾಗಿರಲಿಲ್ಲ. ಸುಲಭವಾಗಿ ಗೆಲುವು ಸಾಧಿಸಿದ್ದೇನೆ. ಪಂದ್ಯದ ಕಡೆಗೆ ಸಂಪೂರ್ಣ ಗಮನ ನೀಡಿ ಜಯಿಸಿದ್ದೇನೆ. ವಿಶ್ವ ಚಾಂಪಿಯನ್ ಶಿಪ್ ಗೆಲುವು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com