ಹಾಕಿ: ಬೆಲ್ಜಿಯಂ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಯುರೋಪಿಯನ್ ಚಾಂಪಿಯನ್ ಬೆಲ್ಜಿಯಂ ತಂಡವನ್ನು ವಿಶ್ವದ ಐದನೇ ಶ್ರೇಯಾಂಕಿತ ಭಾರತ 5–1ರಿಂದ ದೊಡ್ಡ ಅಂತರದಿಂದ ಐದನೇ ಪಂದ್ಯದಲ್ಲಿ ಸೋಲಿಸಿತು.
ಉಭಯ ತಂಡಗಳು
ಉಭಯ ತಂಡಗಳು

ನವದೆಹಲಿ: ಯುರೋಪಿಯನ್ ಚಾಂಪಿಯನ್ ಬೆಲ್ಜಿಯಂ ತಂಡವನ್ನು ವಿಶ್ವದ ಐದನೇ ಶ್ರೇಯಾಂಕಿತ ಭಾರತ 5–1ರಿಂದ ದೊಡ್ಡ ಅಂತರದಿಂದ ಐದನೇ ಪಂದ್ಯದಲ್ಲಿ ಸೋಲಿಸಿತು.

ಭಾರತ ತಂಡ ಬೆಲ್ಜಿಯಂ ಪ್ರವಾಸದಲ್ಲಿ ತಮ್ಮ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದೆ. ಕಳೆದ ಪಂದ್ಯದಲ್ಲಿ ಭಾರತದ ಸಿಮ್ರಾಂಜಿತ್ ಸಿಂಗ್ (7ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (35ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್ (36ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (42ನೇ ನಿಮಿಷ) ಮತ್ತು ರಮಂದೀಪ್ ಸಿಂಗ್ (43ನೇ ನಿಮಿಷ) ಗಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತವು 2-0 ಯಿಂದ ಬೆಲ್ಜಿಯಂ ವಿರುದ್ಧ, ಎರಡು ಪಂದ್ಯಗಳಲ್ಲಿ ಸ್ಪೇನ್ ತಂಡವನ್ನು 6–1 ಮತ್ತು 5–1ರಿಂದ ಸೋಲಿಸಿತು. ನಂತರ ಪ್ರವಾಸದ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ 2–1 ಮತ್ತು 5–1ರಲ್ಲಿ ಬೆಲ್ಜಿಯಂ ತಂಡವನ್ನು ಸೋಲಿಸಿತು.

ಭಾರತ ಪಂದ್ಯವನ್ನು ಆಕ್ರಮಣಕಾರಿಯಾಗಿ ಆರಂಭಿಸಿತು ಮತ್ತು ಏಳನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿದ ನಂತರ ಕೊನೆಯವರೆಗೂ ಲಯವನ್ನು ಕಾಯ್ದುಕೊಂಡಿತು. ಮೊದಲಾರ್ಧದಲ್ಲಿ ಭಾರತ ಕೇವಲ ಒಂದು ಗೋಲಿನ ಮುನ್ನಡೆ ಸಾಧಿಸಿತು ಆದರೆ ದ್ವಿತೀಯಾರ್ಧದಲ್ಲಿ ಭಾರತ ಎಂಟು ನಿಮಿಷಗಳ ಮಧ್ಯಂತರದಲ್ಲಿ ನಾಲ್ಕು ಗೋಲುಗಳನ್ನು ಗಳಿಸಿತು ಮತ್ತು ಆತಿಥೇಯರನ್ನು ಸಂಪೂರ್ಣವಾಗಿ ಕೆಡವಿತು.

39 ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಅವರು ಬೆಲ್ಜಿಯಂನ ಏಕೈಕ ಗೋಲು ಬಾರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com