ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌:  3000 ಮೀ. ಸ್ಟಿಪಲ್‌ಚೇಸ್ ವಿಭಾಗದಲ್ಲಿ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆದ ಅವಿನಾಶ್

ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 3000ಮೀ. ಸ್ಟೀಪಲ್‌ಚೇಸ್ ವಿಭಾಗದಲ್ಲಿ ಭಾರತದ ಅವಿನಾಶ್ ಸಾಬ್ಲೆೆ ಅವರು ಫೈನಲ್ ಸುತ್ತಿನಲ್ಲಿ 13ನೇ ಸ್ಥಾನ ಪಡೆಯುವ ಮೂಲಕ 2020ರ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯುವಲ್ಲಿ ಸಫಲರಾದರು.
ಅವಿನಾಶ್ ಸಾಬ್ಲೆೆ
ಅವಿನಾಶ್ ಸಾಬ್ಲೆೆ

ದೋಹಾ(ಕತಾರ್): ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆೆಟಿಕ್ಸ್‌ ಚಾಂಪಿಯನ್‌ಶಿಪ್‌ನ 3000ಮೀ. ಸ್ಟೀಪಲ್‌ಚೇಸ್ ವಿಭಾಗದಲ್ಲಿ ಭಾರತದ ಅವಿನಾಶ್ ಸಾಬ್ಲೆೆ ಅವರು ಫೈನಲ್ ಸುತ್ತಿನಲ್ಲಿ 13ನೇ ಸ್ಥಾನ ಪಡೆಯುವ ಮೂಲಕ 2020ರ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯುವಲ್ಲಿ ಸಫಲರಾದರು.

ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯಲು 8:22.00 ರ ಅವಧಿಯಲ್ಲಿ ಮುಗಿಸಬೇಕಿತ್ತು. ಆದರೆ, ಭಾರತದ ಅಥ್ಲಿಟ್ 8:21.37ರಲ್ಲಿ ಮುಗಿಸಿ ರಾಷ್ಟ್ರೀಯ ದಾಖಲೆ ಮಾಡುವ ಜತೆಗೆ ಟೋಕಿಯೊ ಒಲಿಂಪಿಕ್ಸ್‌ ಟಿಕೆಟ್ ತನ್ನದಾಗಿಸಿಕೊಂಡರು.

ಈ ಬಗ್ಗೆೆ ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವಿಟರ್‌ನಲ್ಲಿ ‘‘ನಮ್ಮ ಅಗ್ರ ಅಥ್ಲಿಟ್ ಅವಿನಾಶ್ ಸಾಬ್ಲೆೆ ಅವರು ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆೆಟಿಕ್ಸ್‌ ಚಾಂಪಿಯನ್‌ಶಿಪ್ 3000ಮೀ ಸ್ಟೀಪಲ್‌ಚೇಸ್ ವಿಭಾಗದ ಫೈನಲ್‌ನಲ್ಲಿ 13ನೇ ಸ್ಥಾನ ಪಡೆದು 2020ರ ಟೋಕಿಯೊ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 3000ಮೀ. ಅನ್ನು 8:21.37 ಅವಧಿಯಲ್ಲಿ ಪೂರ್ಣಗೊಳಿಸಿದ್ದರು. ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯಲು 8:22.00 ಅವಧಿ ನಿಗಧಿ ಮಾಡಲಾಗಿತ್ತು’’ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com