ವಿಶ್ವ ಮಹಿಳಾ ಬಾಕ್ಸಿಂಗ್: ಫೈನಲ್ಸ್ ತಲುಪಿ ಬೆಳ್ಳಿ ಪದಕ ಖಚಿತಪಡಿಸಿದ ಮಂಜು ರಾಣಿ

ವಿಶ್ವ ಮಹಿಳೆಯರ  ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48 ಕೆಜಿ ವಿಭಾಗದಲ್ಲಿ ಭಾರತೀಯ ಮಹಿಳಾ ಬಾಸ್ಕರ್ ಮಂಜು ರಾಣಿ ಫೈನಲ್ಸ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಸ್ವರ್ಣ ಅಥವಾ ರಜತ ಪದಕದ ಭರವಸೆಯನ್ನು ಗಟ್ಟಿಗೊಳಿಸಿದ್ದಾರೆ.

Published: 12th October 2019 04:51 PM  |   Last Updated: 12th October 2019 04:51 PM   |  A+A-


ವಿಶ್ವ ಮಹಿಳಾ ಬಾಕ್ಸಿಂಗ್: ಫೈನಲ್ಸ್ ತಲುಪಿ ಬೆಳ್ಳಿ ಪದಕ ಖಚಿತಪಡಿಸಿದ ಮಂಜು ರಾಣಿ

Posted By : Raghavendra Adiga
Source : IANS

ಉಡಾನ್ ಉಡೆ(ರಷ್ಯಾ): ವಿಶ್ವ ಮಹಿಳೆಯರ  ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48 ಕೆಜಿ ವಿಭಾಗದಲ್ಲಿ ಭಾರತೀಯ ಮಹಿಳಾ ಬಾಸ್ಕರ್ ಮಂಜು ರಾಣಿ ಫೈನಲ್ಸ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಸ್ವರ್ಣ ಅಥವಾ ರಜತ ಪದಕದ ಭರವಸೆಯನ್ನು ಗಟ್ಟಿಗೊಳಿಸಿದ್ದಾರೆ.

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಈ ಬಾರಿ ಸೆಮಿಫೈನಲ್ಸ್ ನಲ್ಲಿ ಸೋತು ಕಂಚಿನ ಪದಕ ಗಳಿಸಿಕೊಂಡಿದ್ದರೆ ಮಂಜು ರಾಣಿ ಥಾಯ್ ಲ್ಯಾಂಡಿನ ಚುತಮಾತ್ ರಾಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದಾರೆ.

ಹರಿಯಾಣ ಮೂಲದ ಮಂಜು ರಾಣಿ ಪ್ರಾರಂಭದಲ್ಲಿ ನಿಧಾನಗತಿ ಆಟವಾಡಿದರೂ ನಂತರದಲ್ಲಿ ಬಲಿಷ್ಟ ಹೊಡೆತಗಳಿಂದ ಎದುರಾಳಿಯನ್ನು ಮಣ್ಣು ಮುಕ್ಕಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಪಂದ್ಯದ ತೀರ್ಪುಗಾರರು ನಿಡಿರುವ ಅಂಕಗಳು ಮಂಜು ರಾಣಿ ಅವರ ಪರವಾಗಿ ಬಂದವು.

ತನ್ನ ಮೊದಲ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮಂಜು ರಾಣಿ ಭಾನುವಾರ ಫೈನಲ್ಸ್ ಪಂದ್ಯವನ್ನಾಡಲಿದ್ದು ಅಲ್ಲಿ ಆಕೆ ರಷ್ಯಾದ ಎರಡನೇ ಶ್ರೇಯಾಂಕಿತೆ ಎಕಟೆರಿನಾ ಪಾಲ್ಟ್ಸೆವಾ ಅವರನ್ನು ಎದುರಿಸಲಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp