'ಭಾರತಕ್ಕೆ ಚಿನ್ನದ ಕನಸು ಭಗ್ನ: ಬೆಳ್ಳಿಗೆ ತೃಪ್ತರಾದ ಮಂಜ ರಾಣಿ'

ರಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್;ನಲ್ಲಿ ಒಂದೇ-ಒಂದು ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಕೂಡ ಹುಸಿಯಾಯಿತು. 
'ಭಾರತಕ್ಕೆ ಚಿನ್ನದ ಕನಸು ಭಗ್ನ: ಬೆಳ್ಳಿಗೆ ತೃಪ್ತರಾದ ಮಂಜ ರಾಣಿ'
'ಭಾರತಕ್ಕೆ ಚಿನ್ನದ ಕನಸು ಭಗ್ನ: ಬೆಳ್ಳಿಗೆ ತೃಪ್ತರಾದ ಮಂಜ ರಾಣಿ'

ಉಲಾನ್ ಉಡೆ (ರಷ್ಯಾ): ರಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್;ನಲ್ಲಿ ಒಂದೇ-ಒಂದು ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಕೂಡ ಹುಸಿಯಾಯಿತು. 

ಭಾನುವಾರ ನಡೆದಿದ್ದ 48 ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಮಂಜು ರಾಣಿ ಅವರು ಸ್ಥಳೀಯ ಬಾಕ್ಸರ್ ಎಕಟೆರಿನ್ ಪಾಲ್ಟ್ಸೆವಾ ವಿರುದ್ಧ 1-4 ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. 

ಶನಿವಾರ ಮಂಜು ರಾಣಿ ಸೆಮಿಫೈನಲ್ ಹಣಾಹಣಿಯಲ್ಲಿ ಥಾಯ್ಲೆಂಡ್‍ನ ಚಥುಮತ್ ರಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆದ್ದು ಫೈನಲ್;ಗೆ ಲಗ್ಗೆ ಇಟ್ಟಿದ್ದರು.  ಆ ಮೂಲಕ, ಫೈನಲ್ ತಲುಪಿದ್ದ ಭಾರತದ ಏಕೈಕ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು. 

ಪ್ರಸ್ತುತ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್;ಶಿಪ್ ಚೊಚ್ಚಲ ಫೈನಲ್ ಪ್ರವೇಶ ಮಾಡಿದ ಭಾರತ ಮೊದಲ ಬಾಕ್ಸರ್ ಎಂಬ ಸಾಧನೆಗೆ  18ರ ಪ್ರಾಯದ ಮಂಜು ರಾಣಿ ಭಾಜನರಾಗಿದ್ದರು. ಆದರೆ, ಅವರ ಕನಸು ನನಸಾಗಲಿಲ್ಲ.

ಚಾಂಪಿಯನ್;ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಅವರು ಸೆಮಿಫೈನಲ್ ಪಂದ್ಯದಲ್ಲಿ ಬುಸೆನಾಜ್ ವಿರುದ್ಧ 1-4 ಅಂತರದಲ್ಲಿ ಸೋಲು ಅನುಭವಿಸಿ ಕಂಚಿಗೆ ಸೀಮಿತರಾದರು. ಜತೆಗೆ, ಜಮುನಾ ರಾವ್ ಹಾಗೂ ಲೊವ್ಲಿನಾ ಅವರು ಕೂಡ ಕ್ರಮವಾಗಿ 54 ಮತ್ತು 69 ಕೆ.ಜಿ ವಿಭಾಗದ ಸೆಮಿಫೈನಲ್;ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com