59ನೇ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್: ದ್ಯುತಿಗೆ ಡಬಲ್ ಸ್ವರ್ಣ

ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಅವರು 59ನೇ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಎರಡು ಸ್ವರ್ಣ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

Published: 14th October 2019 10:33 AM  |   Last Updated: 14th October 2019 10:33 AM   |  A+A-


59ನೇ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್: ದ್ಯುತಿಗೆ ಡಬಲ್ ಸ್ವರ್ಣ

Posted By : raghavendra
Source : UNI

ರಾಂಚಿ: ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಅವರು 59ನೇ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಎರಡು ಸ್ವರ್ಣ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ದ್ಯುತಿ ಅವರು 200 ಮೀಟರ್ 23.17 ಸೆಕೆಂಡ್ ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಇದು ಪ್ರಸಕ್ತ ಋತುವಿನಲ್ಲಿ ದ್ಯುತಿ ಅವರು ವೇಗವಾಗಿ ಕ್ರಮಿಸಿದರು. ದ್ಯುತಿ ಅವರು 100 ಮೀಟರ್ ನಲ್ಲಿ ರಾಷ್ಟ್ರೀಯ ದಾಖಲೆ ಬರೆದು, 200 ಮೀಟರ್ ಓಟವನ್ನೂ ಸಹ ಮೊದಲಿಗರಾಗಿ ಗೆದ್ದು ಬೀಗಿದ್ದಾರೆ.

ಕಾರ್ತಿಕ್ ಉನ್ನೀಕೃಷ್ಣ ಅವರು ತಮ್ಮ ಕೊನೆಯ ಪ್ರಯತ್ನದಲ್ಲಿ 16.78 ಮೀಟರ್ ಜಿಗಿದು ಸ್ವರ್ಣ ಗೆದ್ದರು. ಚಿಂತಾ ಯಾದವ್ 3000 ಮೀಟರ್ ಓಟದಲ್ಲಿ 10 ನಿಮಿಷ 11.70 ಸೆಕೆಂಡ್ ಗಳಲ್ಲಿ ಕ್ರಮಿಸಿದರು. ರೈಲ್ವೆಯ ಪಿಯು ಚಿತ್ರಾ 1500 ಮೀಟರ್ ಹಾಗೂ 800 ಮೀಟರ್ ನಲ್ಲಿ ಚಿನ್ನ ಗೆದ್ದರು.


Stay up to date on all the latest ಕ್ರೀಡೆ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp