ಮಧ್ಯಪ್ರದೇಶ ಕಾರು ಅಪಘಾತ: ನಾಲ್ವರು ರಾಷ್ಟ್ರಮಟ್ಟದ ಹಾಕಿ ಆಟಗಾರರ ದುರ್ಮರಣ

ಮಧ್ಯಪ್ರದೇಶದ ಹೊಶಾಂಗಬಾದ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ರಾಷ್ಟ್ರೀಯ ಹಾಕಿ ಆಟಗಾರರು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

Published: 14th October 2019 10:29 AM  |   Last Updated: 14th October 2019 01:51 PM   |  A+A-


Identities of the deceased and injured are yet to be ascertained by the police

ಅಪಘಾತವಾದ ಸ್ಥಳ

Posted By : Shilpa D
Source : ANI

ಹೊಶಾಂಗಬಾದ್: ಮಧ್ಯಪ್ರದೇಶದ ಹೊಶಾಂಗಬಾದ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ರಾಷ್ಟ್ರೀಯ ಹಾಕಿ ಆಟಗಾರರು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಮೃತಪಟ್ಟ ಆಟಗಾರರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಈ ಆಟಗಾರರು ಇತರಾಸಿಯಿಂದ ಹೊಶಂಗಾಬಾದ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಧ್ಯಾನ್ ಚಂದ್ ಟ್ರೋಫಿ ಕೂಟದಲ್ಲಿ ಆಡಲು ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 69ರ ರೈಸಲಾ ಪುರ್ ದಲ್ಲಿ ಈ ಘಟನೆ ನಡೆದಿದೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp