ಫುಟ್ಬಾಲ್ ದಂತಕಥೆ ರೊನಾಲ್ಡೋ ನೂತನ ದಾಖಲೆ! ವೃತ್ತಿ ಜೀವನದ 700 ಗೋಲು ಗಳಿಸಿದ ಪೋರ್ಚುಗಲ್ ಆಟಗಾರ

ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ವೃತ್ತಿ ಜೀವನದ 700 ಗೋಲುಗಳನ್ನು ಸೋಮವಾರ ಉಕ್ರೈನ್ ವಿರುದ್ಧದ ಯುರೋ-2020ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೂರೈಸಿದರು.

Published: 15th October 2019 02:27 PM  |   Last Updated: 15th October 2019 02:28 PM   |  A+A-


ಕ್ರಿಸ್ಟಿಯಾನೊ ರೊನಾಲ್ಡೊ

Posted By : Raghavendra Adiga
Source : UNI

ನವದೆಹಲಿ ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ವೃತ್ತಿ ಜೀವನದ 700 ಗೋಲುಗಳನ್ನು ಸೋಮವಾರ ಉಕ್ರೈನ್ ವಿರುದ್ಧದ ಯುರೋ-2020ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೂರೈಸಿದರು.

ಸೋಮವಾರ ತಡರಾತ್ರಿ ನಡೆದಿದ್ದ ಪಂದ್ಯದಲ್ಲಿ 34ರ ಪ್ರಾಯದ ರೊನಾಲ್ಡೊ ಅವರು ಪೆನಾಲ್ಟಿಯಲ್ಲಿ ಸಿಡಿಸಿದ ಗೋಲಿನ ನೆರವಿನಿದ ಪೋರ್ಚುಗಲ್ ತಂಡ 2-1 ಅಂತರದಲ್ಲಿ ಉಕ್ರೈನ್ ವಿರುದ್ಧ ಗೆಲುವಿನ ನಗೆ ಬೀರಿತು. 700 ಗೋಲುಗಳನ್ನು ಪೂರೈಸಲು ರೊನಾಲ್ಡೊ ಒಟ್ಟು 973 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.

ಇರಾನ್ ನ ಅಲಿ ದಾಯಿ ಅವರು 109 ಅಂತಾರಾಷ್ಟ್ರೀಯ ಗೋಲುಗಳನ್ನು ಸಿಡಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್ ಸ್ಟಾರ್ ಸ್ಟ್ರೈಕರ್ ಎರಡನೇ ಸ್ಥಾನದಲ್ಲಿದ್ದಾರೆ. 700 ಗೋಲು ಸಿಡಿಸುತ್ತಿದ್ದಂತೆ ರೊನಾಲ್ಡೊ 700 ಗೋಲು ಗಳಿಸಿರುವವರ ಎಲೈಟ್ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು.

 

 

ದಾಖಲೆಗಳು ಸ್ವಾಭಾವಿಕವಾಗಿ ಸೃಷ್ಟಿಯಾಗುತ್ತದೆ ಎಂದ ರೊನಾಲ್ಡೋ  "ನಾನು ದಾಖಲೆಗಳ ಹಿಂದೆ ಹೋಗುವವನಲ್ಲ, ಅವು ನನ್ನ ಹಿಂದೆ ಬರುತ್ತಿವೆ. ನಾನು ಇದಾಗಲೇ ನಾಳೆಯ ಬಗೆಗೆ ಯೋಚಿಸಲು ಪ್ರಾರಂಭಿಸಿದ್ದು ನನ್ನ ಮುಂದಿನ ಪಂದ್ಯದಲ್ಲಿ 701ನೇ ಗೋಲು ಗಳಿಸಲಿದ್ದೇನೆ" ಎಂದಿದ್ದಾರೆ. ಅಲ್ಲದೆ ಇದೇನೂ ಸುಲಭವಾದ ಹಾದಿಯಲ್ಲ. ನನಗೆ ಈ ಸಾಧನೆ ಮಾಡಲು ಸಹಾಯ ಮಾಡಿರುವ ಎಲ್ಲರಿಗೆ ನಾನು ಧನ್ಯವಾದ ಹೇಳಬೇಕು ಎಂದೂ ಅವರು ತಮ್ಮ ಮಾತುಗಳಲ್ಲಿ ಸೇರ್ಪಡೆ ಮಾಡಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp