ಫ್ರೆಂಚ್ ಓಪನ್: ಚಿರಾಗ್-ರಂಕಿರೆಡ್ಡಿ ಜೋಡಿ ರನ್ನರ್ ಅಪ್

ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾರತದ ಪುರುಷರ ಡಬಲ್ಸ್ ಜೋಡಿಯು ಫ್ರೆಂಚ್ ಓಪನ್ ಫೈನಲ್ ಹಣಾಹಣಿಯಲ್ಲಿ ಸೋತು ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿತು.
ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಾರ್ಕಸ್ ಫೆರ್ನಾಂಡಿ ಮತ್ತು ಕೆವಿನ್ ಸುಕಮಿಲ್ಜಿ
ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಾರ್ಕಸ್ ಫೆರ್ನಾಂಡಿ ಮತ್ತು ಕೆವಿನ್ ಸುಕಮಿಲ್ಜಿ

ಪ್ಯಾರಿಸ್: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾರತದ ಪುರುಷರ ಡಬಲ್ಸ್ ಜೋಡಿಯು ಫ್ರೆಂಚ್ ಓಪನ್ ಫೈನಲ್ ಹಣಾಹಣಿಯಲ್ಲಿ ಸೋತು ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿತು.

ಭಾನುವಾರ ತಡರಾತ್ರಿ (ಭಾರತದ ಕಾಲಮಾನ) ನಡೆದ ಪುರುಷರ ಡಬಲ್ಸ್ ಜೋಡಿಯು 18-21, 16-21 ಅಂತರದಲ್ಲಿ ನೇರ ಸೆಟ್ ಗಳಿಂದ ವಿಶ್ವ ಅಗ್ರ ಶ್ರೇಯಾಂಕದ ಇಂಡೋನೇಷ್ಯಾದ ಮಾರ್ಕಸ್ ಫೆರ್ನಾಂಡಿ ಮತ್ತು ಕೆವಿನ್ ಸುಕಮಿಲ್ಜಿ ಜೋಡಿಯ ವಿರುದ್ಧ ಸೋತು ನಿರಾಸೆ ಅನುಭವಿಸಿತು. ಆ ಮೂಲಕ ಭಾರತದ ಪರ ಏಕೈಕ ಪ್ರಶಸ್ತಿ ಗೆಲ್ಲುವ ಭರವಸೆ ಹೊಂದಿದ್ದ ಚಿರಾಗ್-ರಂಕಿರೆಡ್ಡಿ ಜೋಡಿ ಫೈನಲ್ ಪಂದ್ಯದಲ್ಲಿ ಎಡವಿತು.

ಥಾಯ್ಲೆಂಡ್ ಓಪನ್ ಚಾಂಪಿಯನ್ ಭಾರತದ ಜೋಡಿಯು ಮೊದಲನೇ ಸೆಟ್ ನಲ್ಲಿ 4-9 ಹಿನ್ನಡೆ ಅನುಭವಿಸಿತ್ತು. ಅಂಕ ಸಮಬಲ ಮಾಡಿಕೊಳ್ಳಲು ಪ್ರಯತ್ನ ನಡೆಸುತಾದರೂ ಮೊದಲಾರ್ಧದ ಅವಧಿಗೆ ಇಂಡೋನೇಷ್ಯಾ ಜೋಡಿ ಮೇಲುಗೈ ಸಾಧಿಸಿತು. ಬ್ರೆಕ್ ನಂತರ ಅಂಗಳಕ್ಕೆ ಆಗಮಿಸಿದ ಎದುರಾಳಿ ಜೋಡಿ ಶರವೇಗದಲ್ಲಿ ಅಂಕಗಳನ್ನು ಕಲೆ ಹಾಕಿ 21-18 ಅಂತರದಲ್ಲಿ ಮೊದಲನೇ ಸೆಟ್ ತನ್ನದಾಗಿಸಿಕೊಂಡಿತು.

ಎರಡನೇ ಸೆಟ್ ನಲ್ಲಿ ತೀವ್ರ ಒತ್ತಡದಲ್ಲಿ ಕಣಕ್ಕೆ ಇಳಿದ ಸಾತ್ವಿಕ್-ಚಿರಾಗ್ ಜೋಡಿ ವಿಶ್ವದ ಅಗ್ರ ಶ್ರೇಯಾಂಕದ ಜೋಡಿಯನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗಲೇ ಇಲ್ಲ. ಅತ್ಯುತ್ತಮ ಪ್ರದರ್ಶನ ತೋರಿದ ಇಂಡೋನೇಷ್ಯಾ ಜೋಡಿಯು 21-16 ಅಂತರದಲ್ಲಿ ಭಾರತದ ಜೋಡಿಯನ್ನು ಮಣಿಸಿ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡಿತು.

ಸೋಲಿನ ಹೊರತಾಗಿಯೂ ಭಾರತದ ಪುರುಷರ ಡಬಲ್ಸ್ ಜೋಡಿಯು ವಿಶ್ವ ಟೂರ್ 750 ಟೂರ್ನಿಯಲ್ಲಿ ಫೈನಲ್ ತಲುಪಿದ ಗೌರವಕ್ಕೆ ಭಾಜನವಾಯಿತು. ಕಳೆದ ಆಗಸ್ಟ್‍ನಲ್ಲಿ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ವಿಶ್ವದ ಎರಡನೇ ಶ್ರೇಯಾಂಕದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಥಿಯವನ್ ಇಂಡೋನೇಷ್ಯಾದ ಜೋಡಿಯನ್ನು ಮಣಿಸಿ ಥಾಯ್ಲೆಂಡ್ ಓಪನ್ ಚಾಂಪಿಯನ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com