ಫ್ರೆಂಚ್ ಓಪನ್: ಫೈನಲ್ ನಲ್ಲಿ ಎಡವಿದ ಸಾತ್ವಿಕ್-ಚಿರಾಗ್ ಜೋಡಿ, ರನ್ನರ್ ಅಪ್ ಗೆ ತೃಪ್ತಿ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ ಭಾರತದ ಸಾತ್ವಿಕ್-ಚಿರಾಗ್ ಜೋಡಿ ಅಂತಿಮ ಸುತ್ತಿನಲ್ಲಿ ಎಡವಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಸಾತ್ವಿಕ್-ಚಿರಾಗ್ ಜೋಡಿ
ಸಾತ್ವಿಕ್-ಚಿರಾಗ್ ಜೋಡಿ

ಪ್ಯಾರಿಸ್: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ ಭಾರತದ ಸಾತ್ವಿಕ್-ಚಿರಾಗ್ ಜೋಡಿ ಅಂತಿಮ ಸುತ್ತಿನಲ್ಲಿ ಎಡವಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಭಾರತ ಪುರುಷರ ವಿಭಾಗದ ಅಗ್ರ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಾಮ್ ಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಜೋಡಿ ಮಾರ್ಕಸ್ ಫೆರ್ನಾಲ್ಡಿ ಮತ್ತು ಕೆವಿನ್ ಸುಕಮುಲ್ಜೊ ಅವರ ವಿರುದ್ಧ 18-21, 16-21 ನೇರ ಸೆಟ್ ಗಳ ಅಂತರದಲ್ಲಿ ಸೋಲುಕಂಡಿದ್ದಾರೆ.

1983ರಲ್ಲಿ ಭಾರತದ ಪಾರ್ಥೋ ಗಂಗೂಲಿ ಮತ್ತು ವಿಕ್ರಮ್ ಸಿಂಗ್ ಫ್ರೆಂಚ್ ಓಪನ್ ನಲ್ಲಿ ಫೈನಲ್ ತಲುಪಿದ್ದರು. ಆ ಬಳಿಕ ಇದೇ ಮೊದಲ ಬಾರಿಗೆ ಸಾತ್ವಿಕ್ ಸಾಯಿರಾಜ್ ರಾಮ್ ಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಫೈನಲ್ ತಲುಪಿ ಇತಿಹಾಸ ಬರೆದಿದ್ದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ನಿರಾಸೆ ಅನುಭವಿಸಿದೆ.

ಭಾರತದ ಯಶಸ್ವೀ ಜೋಡಿ ಎಂದೇ ಖ್ಯಾತಿಗಳಿಸಿದ್ದ ಸಾತ್ವಿಕ್-ಚಿರಾಗ್ ಜೋಡಿ ತಾವಾಡಿದ 11 ಫೈನಲ್ ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಸೋಲು ಕಂಡಿದ್ದಾರೆ. ಈ ವರ್ಷ ಆಗಸ್ಟ್ ನಲ್ಲಿ ನಡೆದಿದ್ದ ಥಾಯ್ ಲ್ಯಾಂಡ್  ಓಪನ್‌ನಲ್ಲಿ ಸಹ ಸಾತ್ವಿಕ್ -ಚಿರಾಗ್ ಜೋಡಿ ಮೊದಲ ಸೂಪರ್ 500 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com