ಭಾರತದ ನಾಲ್ಕು ಬಾಕ್ಸರ್ ಗಳಿಗೆ ಮೊದಲ ಪಂದ್ಯದಿಂದ ಬೈ

ಸೋಮವಾರದಿಂದ ರಷ್ಯಾದ ಯೆಕಟೆರಿನ್‌ ಬರ್ಗ್‌ನಲ್ಲಿ ಆರಂಭವಾಗಲಿರುವ ಇಬಾ ಪುರುಷರ ವಿಶ್ವ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಬಾಕ್ಸರ್‌ಗಳಿಗೆ ಬೈ ಸಿಕ್ಕಿದೆ.
ಅಮಿತ್ ಪಂಗಲ್
ಅಮಿತ್ ಪಂಗಲ್

ನವದೆಹಲಿ: ಸೋಮವಾರದಿಂದ ರಷ್ಯಾದ ಯೆಕಟೆರಿನ್‌ ಬರ್ಗ್‌ನಲ್ಲಿ ಆರಂಭವಾಗಲಿರುವ ಇಬಾ ಪುರುಷರ ವಿಶ್ವ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಬಾಕ್ಸರ್‌ಗಳಿಗೆ ಬೈ ಸಿಕ್ಕಿದೆ.

ಮೊದಲ ಸುತ್ತಿನಲ್ಲಿ ಅಮಿತ್ ಪಂಗಲ್(52), ಕವಿಂದರ್ ಸಿಂಗ್ ಬಿಶ್ತ್(57) ಮತ್ತು ಆಶಿಶ್ ಕುಮಾರ್(75) ಸೇರಿದಂತೆ ಒಟ್ಟು ನಾಲ್ಕು ಭಾರತೀಯ ಬಾಕ್ಸರ್ ಗಳು ಮೊದಲ ಪಂದ್ಯದಿಂದ ಬೈ ಪಡೆದಿದ್ದಾರೆ. 

ಏಷ್ಯನ್ ಗೇಮ್ಸ್ ಚಿನ್ನದ ವಿಜೇತ ಅಮಿತ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು, ಇವರು ಪದಕ ಸುತ್ತಿನಲ್ಲಿ ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಮೂರನೇ ಶ್ರೇಯಾಂಕದ ಕೊಲಂಬಿಯಾದ ಉಬರ್ಜೆನ್ ಮಾರ್ಟಿನೆಜ್ ಅವರನ್ನು ಎದುರಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com