ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್

ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಓಪನ್ ಟೂರ್ನಿಯ ಪೈನಲ್ ನಲ್ಲಿ ಸ್ಪೈನ್ ನ ಟೆನ್ನಿಸ್ ದಂತಕಥೆ ರಾಫೆಲ್ ನಡಾಲ್ ವಿರೋಚಿತ ಜಯ ಸಾಧಿಸಿ ನಾಲ್ಕನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್
ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್

ರಷ್ಯಾದ ಮೆಡ್ವೆಡೆವ್ ರಿಂದ ತೀವ್ರ ಹೋರಾಟ, ಬರೊಬ್ಬರಿ ಐದು ಸೆಟ್ ಗಳ ವರೆಗೂ ಮುಂದುವರೆದ ಮ್ಯಾರಥಾನ್ ಬ್ಯಾಟಲ್

ನ್ಯೂಯಾರ್ಕ್: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಓಪನ್ ಟೂರ್ನಿಯ ಪೈನಲ್ ನಲ್ಲಿ ಸ್ಪೈನ್ ನ ಟೆನ್ನಿಸ್ ದಂತಕಥೆ ರಾಫೆಲ್ ನಡಾಲ್ ವಿರೋಚಿತ ಜಯ ಸಾಧಿಸಿ ನಾಲ್ಕನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಇಲ್ಲಿನ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ರಷ್ಯಾದ ಮೆಡ್ವೆಡೆವ್ ಅವರನ್ನು 7-5, 6-3, 5-7, 4-6, 6-4 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿದರು. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ನಡಾಲ್ ಗೆ ಮೆಡ್ವೆಡೆವ್ ತೀವ್ರ ಪ್ರತಿರೋಧ ಒಡ್ಡಿದ್ದರು. ಬರೊಬ್ಬರಿ ಐದು ಸೆಟ್ ಗಳ ವರೆಗೂ ನಡೆದ ಮ್ಯಾರಥಾನ್ ಹೋರಾಟದಲ್ಲಿ ನಡಾಲ್ ಅಂತಿಮ ಸೆಟ್ ಅನ್ನು 6-4 ಅಂತರದಲ್ಲಿ ತಮ್ಮದಾಗಿಸಿಕೊಳ್ಳುವದರೊಂದಿಗೆ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟರು.

ನಡಾಲ್ ಗೆ ಇದು 19ನೇ ಗ್ರಾಂಡ್ ಸ್ಲಾಮ್ ಆಗಿದ್ದು, 27ನೇ ಗ್ರ್ಯಾಂಡ್‌ಸ್ಲಾಂ ಫೈನಲ್‌ ಪಂದ್ಯವಾಗಿತ್ತು. 

ಇನ್ನು 20 ಪ್ರಶ​ಸ್ತಿ​ಗ​ಳೊಂದಿಗೆ ಅತಿ​ಹೆಚ್ಚು ಗ್ರ್ಯಾಂಡ್‌ಸ್ಲಾಂ ಗೆದ್ದ ಆಟ​ಗಾ​ರರ ಪಟ್ಟಿ​ಯಲ್ಲಿ ರೋಜರ್‌ ಫೆಡ​ರರ್‌ ಮೊದಲ ಸ್ಥಾನ​ದ​ಲ್ಲಿದ್ದು, ನಡಾಲ್‌ 2ನೇ ಸ್ಥಾನ​ದ​ಲ್ಲಿ​ದ್ದಾರೆ. ಯುಎಸ್‌ ಓಪನ್‌ ಗೆದ್ದರೆ ನಡಾಲ್‌, ಫೆಡ​ರರ್‌ ಸಮೀ​ಪ​ಕ್ಕೆ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com