ಎಟಿಪಿ ಶ್ರೇಯಾಂಕ: ಫೆಡರರ್ ವಿರುದ್ಧ ಸೆಣಸಿದ ಸುಮಿತ್ ನಗಾಲ್ ಜೀವನಶ್ರೇಷ್ಠ ಸಾಧನೆ

ವರ್ಷದ ಕೊನೆಯ ಹಾಗೂ ನಾಲ್ಕನೇ ಗ್ರ್ಯಾನ್ ಸ್ಲ್ಯಾಮ್ ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ 20 ಗ್ರ್ಯಾನ್ ಸ್ಲ್ಯಾಮ್ ವಿಜೇತ ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಅವರ ವಿರುದ್ಧ ಸೋಲು ಅನುಭವಿಸಿರುವ ಭಾರತದ ಸ್ಟಾರ್ ಆಟಗಾರ ಸುಮಿತ್ ನಗಾಲ್ ಶ್ರೇಯಾಂಕದಲ್ಲಿ 16 ಸ್ಥಾನ ಏರಿಕೆ ಕಂಡಿದ್ದಾರೆ.
ಸುಮಿತ್ ನಗಾಲ್
ಸುಮಿತ್ ನಗಾಲ್

ಸೆರೇನಾ ಮಣಿಸಿದ ಬಿಯಾಂಕಾಗೆ ಐದನೇ ಸ್ಥಾನ

ನವದೆಹಲಿ: ವರ್ಷದ ಕೊನೆಯ ಹಾಗೂ ನಾಲ್ಕನೇ ಗ್ರ್ಯಾನ್ ಸ್ಲ್ಯಾಮ್ ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ 20 ಗ್ರ್ಯಾನ್ ಸ್ಲ್ಯಾಮ್ ವಿಜೇತ ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಅವರ ವಿರುದ್ಧ ಸೋಲು ಅನುಭವಿಸಿರುವ ಭಾರತದ ಸ್ಟಾರ್ ಆಟಗಾರ ಸುಮಿತ್ ನಗಾಲ್ ಶ್ರೇಯಾಂಕದಲ್ಲಿ 16 ಸ್ಥಾನ ಏರಿಕೆ ಕಂಡಿದ್ದಾರೆ.

ಇಪ್ಪತ್ತೆರಡು ವರ್ಷದ ನಗಾಲ್ ಅವರ ವೃತ್ತಿಬದುಕಿನ ವೈಉಯುಕ್ತಿಕ ಶ್ರೇಷ್ಠ ಸಾಧನೆ ಇದಾಗಿದೆ.

ನಗಾಲ್ ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯ ಗೆದ್ದು, ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್‌ನ ಟೂರ್ನಿಯ ಪ್ರಧಾನ ಘಟ್ಟ ಪ್ರವೇಶಿಸಿದ್ದರು. ಮೊದಲ ಸುತ್ತಿನಲ್ಲಿ ಅವರು ವಿಶ್ವದ ಮೂರನೇ ಕ್ರಮಾಂಕದ ಫೆಡರರ್ ಅವರ ವಿರುದ್ಧ ಕಾದಾಟ ನಡೆಸಿದರು. ಫೆಡರರ್ ಕಾಡಿದ ನಗಾಲ್ ಎಲ್ಲರ ಚಿತ್ತ ಕದ್ದರು. ನಗಾಲ್ ಈ ಪ್ರದರ್ಶನದ ಬಲದಿಂದ 16 ಸ್ಥಾನ ಏರಿಕೆ ಕಂಡಿದ್ದು, 174 ನೇ ಸ್ಥಾನಕ್ಕೆ ತಲುಪಿದ್ದಾರೆ.

ಪ್ರಜ್ಞೇಶ್ ಗುಣ್ಣೇಶ್ವರನ್ ಮೂರು ಸ್ಥಾನಗಳನ್ನು ಜಿಗಿತ ಕಂಡಿದ್ದು, 85 ನೇ ಸ್ಥಾನದೊಂದಿಗೆ ದೇಶದ ನಂಬರ್ ಒನ್ ಸಿಂಗಲ್ಸ್ ಆಟಗಾರನಾಗಿ ಉಳಿದಿದ್ದಾರೆ. ರಾಮ್‌ಕುಮಾರ್ ರಾಮನಾಥನ್ 176, ಶಶಿ ಕುಮಾರ್ ಮುಕುಂದ್ 241 ನೇ ಸ್ಥಾನಕ್ಕೆ ತಲುಪಿದ್ದಾರೆ. ಸಾಕೇತ್ ಮೈನೆನಿ ಒಂಬತ್ತು ಸ್ಥಾನ ಇಳಿಕೆ ಕಂಡಿದ್ದು, 258 ನೇ ಸ್ಥಾನ ಹೊಂದಿದ್ದಾರೆ.

ಇನ್ನೊಂದೆಡೆ ಭಾರತದ ಜನಪ್ರಿಯ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ನಾಲ್ಕು ಸ್ಥಾನ ಕುಸಿತ ಕಂಡಿದ್ದಾರೆ. ಡಬಲ್ಸ್ ವಿಭಾಗದ ಬೋಪಣ್ಣ ೪೩ನೇ ಸ್ಥಾನಕ್ಕಿಳಿದಿದ್ದಾರೆ. ಇನ್ನು ದಿವಿಜ್ ಶರಣ್ ಹಾಗೂ ಲಿಯಾಂಡರ್ ಪೇಸ್ ೪೯ ಹಾಗೂ ೭೮ನೇ ಸ್ಥಾನದಲ್ಲಿದ್ದಾರೆ. 

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅಂಕಿತಾ ರೈನಾ ೧೯೪ನೇ ಸ್ಥಾನ ಗಳಿಸಿದರೆ ಪ್ರಾಂಜಲಾ ಯಡ್ಲಪಳ್ಳಿ ೩೩೮ನೇ ಸ್ಥಾನ ಹೊಂದಿದ್ದಾರೆ.

ಬಿಯಾಂಕಾಗೆ ಐದನೇ ಸ್ಥಾನ

ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಬಲ ಎದುರಾಳಿ ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದ ಕೆನಡಾ ಆಟಗಾರ್ತಿ ಬಿಯಾಂಕಾ ಆಂಡ್ರಿಸ್ಕೋ ವಿಶ್ವ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.

ಹತ್ತೊಂಬತ್ತರ ಹರೆಯದ ಆಟಗಾರ್ತಿ ಹತ್ತು ಸ್ಥಾನ ಮೇಲೇರಿದ್ದು ಒಟ್ಟು ೪೮೩೫ ಪಾಯಿಂಟ್ ಗಳಿಸಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಆಷ್ಲೆ ಬಾರ್ಟಿ ಅಗ್ರಸ್ಥಾನದಲ್ಲಿದ್ದರೆ ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಹಾಗೂ ಉಕ್ರೇನ್ ನ ಎಲಿನಾ ಸ್ವಿಟೋಲಿನಾ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಹೊಂದಿದ್ದಾರೆ.

ಇನ್ನು ಯುಎಸ್ ಓಪನ್ ಫೈನಲ್ಸ್ ಕೈಚೆಲ್ಲಿದ ಸೆರೆನಾ ವಿಲಿಯಮ್ಸ್ ಒಂದು ಸ್ಥಾನ ಕೆಳಗಿಳಿದು ರ್ಯಾಂಕಿಂಗ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಅಲಂಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com