ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ: ಕತಾರ್ ವಿರುದ್ಧ ಭಾರತಕ್ಕೆಗೋಲುರಹಿತ ಡ್ರಾ

ಗುರುಪ್ರೀತ್‌ ಸಿಂಗ್ ಸಂಧು ಅವರ ದಿಟ್ಟ ರಕ್ಷಣಾತ್ಮಕ ಗೋಲ್‌ ಕೀಪರ್‌ ಕೌಶಲ್ಯದಿಂದ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ ಭಾರತ ತಂಡ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಡ್ರಾ ಸಾಧಿಸಿತು. ಆ ಮೂಲಕ 'ಇ' ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಮೊದಲನೇ ಅಂಕ ಪಡೆಯಿತು.

Published: 11th September 2019 03:04 PM  |   Last Updated: 11th September 2019 03:04 PM   |  A+A-


ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ: ಕತಾರ್ ವಿರುದ್ಧ ಭಾರತಕ್ಕೆಗೋಲುರಹಿತ ಡ್ರಾ

Posted By : Raghavendra Adiga
Source : UNI

ದೋಹಾ: ಗುರುಪ್ರೀತ್‌ ಸಿಂಗ್ ಸಂಧು ಅವರ ದಿಟ್ಟ ರಕ್ಷಣಾತ್ಮಕ ಗೋಲ್‌ ಕೀಪರ್‌ ಕೌಶಲ್ಯದಿಂದ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ ಭಾರತ ತಂಡ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಡ್ರಾ ಸಾಧಿಸಿತು. ಆ ಮೂಲಕ 'ಇ' ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಮೊದಲನೇ ಅಂಕ ಪಡೆಯಿತು.

ಮಂಗಳವಾರ ತಡರಾತ್ರಿ ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಸಮಬಲದ ಹೋರಾಟ ನಡೆಸಿದ ಭಾರತ ಹಾಗೂ ಕತಾರ್‌ ತಂಡಗಳು 0-0 ಅಂತರದಲ್ಲಿ ಡ್ರಾಗೆ ತಪ್ತಿಪಟ್ಟುಕೊಂಡವು.

ಅನಾರೋಗ್ಯದಿಂದ ಬಳಲುತ್ತಿದ್ದ ನಿಯಮಿತ ನಾಯಕ ಸುನೀಲ್‌ ಚೆಟ್ರಿ ಅನುಪಸ್ಥತಿಯಲ್ಲಿ ಗೋಲ್‌ ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ತಂಡವನ್ನು ಮುನ್ನಡೆಸಿದರು. 103ನೇ ಶ್ರೇಯಾಂಕದ ಭಾರತ 62ನೇ ಸ್ಥಾನ ಹೊಂದಿರುವ ಕತಾರ್‌ಗಿಂತ 41 ಶ್ರೇಯಾಂಕ ಕೆಳಗೆ ಇದೆ. 

ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರು ಎಫ್ ಸಿ ನಾಯಕ ಗುರುಪ್ರೀತ್ ಪಂದ್ಯದ ಪ್ರಾರಂಭದಿಂದಲೂ ಎದುರಾಳಿಗಳಿಗೆ ಗೋಲು ಗಳಿಸಿಕೊಳ್ಲದಂತೆ ಪ್ರಬಲ ವಿರೋಧ ಒಡ್ಡಿ ಗಮನ ಸೆಳೆದಿದ್ದಾರೆ. 

ಪಂದ್ಯವು ಒಂದೂ ಗೋಲುಗಳಿಲ್ಲದೆ ಡ್ರಾದಲ್ಲಿ ಅಂತ್ಯವಾಗುತ್ತಲೇ ಟೀಂ ಇಂಡಿಯಾ ಮಾತ್ರ ತಾವು ಗೆಲುವು ಸಾಧಿಸಿದ ರೀತಿಯಲ್ಲಿ ಸಂಭ್ರಮಿಸಿದೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp