ಚೀನಾ ಓಪನ್‌: ಎರಡನೇ ಸುತ್ತಿಗೆ ಪಿ.ವಿ ಸಿಂಧು

ವಿಶ್ವ ಚಾಂಪಿಯನ್‌ ಭಾರತದ ಪಿ.ವಿ ಸಿಂಧು ಅವರು ಬಿಡಬ್ಲ್ಯುಎಫ್‌ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲನೇ ಸುತ್ತಿನ ಪಂದ್ಯದಲ್ಲಿ ಚೀನಾದ ಲೀ ಕ್ಸುಯಿ ರುಯಿ....

Published: 18th September 2019 06:33 PM  |   Last Updated: 18th September 2019 06:33 PM   |  A+A-


Sindhu crashes out of Australian Open, Indian challenge ends

ಪಿವಿ ಸಿಂಧು

Posted By : Lingaraj Badiger
Source : UNI

ನವದೆಹಲಿ: ವಿಶ್ವ ಚಾಂಪಿಯನ್‌ ಭಾರತದ ಪಿ.ವಿ ಸಿಂಧು ಅವರು ಬಿಡಬ್ಲ್ಯುಎಫ್‌ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲನೇ ಸುತ್ತಿನ ಪಂದ್ಯದಲ್ಲಿ ಚೀನಾದ ಲೀ ಕ್ಸುಯಿ ರುಯಿ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದಾರೆ.

ಬುಧವಾರ 34 ನಿಮಿಷಗಳ ಕಾಲ ನಡೆದ ಮೊದಲನೇ ಸುತ್ತಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಐದನೇ ಶ್ರೇಯಾಂಕಿತ ಪಿವಿ ಸಿಂಧು 21-18, 21-12 ಅಂತರದಲ್ಲಿ 19ನೇ ಶ್ರೇಯಾಂಕಿತೆ ರುಯಿ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ , ಚೀನಾ ಎದುರಾಳಿಗಳ ವಿರುದ್ಧ 4-3 ಮುನ್ನಡೆ ಗಳಿಸಿ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಇದಕ್ಕೂ ಮುನ್ನ ಭಾರತ ಹಿರಿಯ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು 10-21, 17-21 ಅಂತರದಲ್ಲಿ ನೇರ ಸೆಟ್‌ಗಳಿಂದ ಥಾಯ್ಲೆಂಡ್‌ನ ಬುಸನನ್‌ ವಿರುದ್ಧ ಸೂತು ಚೀನಾ ಓಪನ್‌ ಹೋರಾಟವನ್ನು ಮುಗಿಸಿದರು.

Stay up to date on all the latest ಕ್ರೀಡೆ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp