ಭಯಾನಕ ವಿಡಿಯೋ: ಪಂದ್ಯದ ವೇಳೆ ಸಿಡಿಲು ಬಡಿದು ಕುಸಿದು ಬಿದ್ದ ಆಟಗಾರರು, ವೈರಲ್!

ಫುಟ್ ಬಾಲ್ ಪಂದ್ಯದ ವೇಳೆ ಮೈದಾನದಲ್ಲೇ ಸಿಡಿಲು ಬಡಿದು ಆಟಗಾರರು ಕುಸಿದು ಬಿದ್ದಿರುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮೈಕಾ: ಫುಟ್ ಬಾಲ್ ಪಂದ್ಯದ ವೇಳೆ ಮೈದಾನದಲ್ಲೇ ಸಿಡಿಲು ಬಡಿದು ಆಟಗಾರರು ಕುಸಿದು ಬಿದ್ದಿರುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.

ಜಮೈಕಾ ಕಿಂಗ್ ಸ್ಟನ್ ಕಾಲೇಜು ಮತ್ತು ವೂಲ್ಮರಾ ಬಾಯ್ಸ್ ಸ್ಕೂಲ್ ನಡುವಿನ ಪಂದ್ಯದ ವೇಳೆ ಸಿಡಿಲು ಬಡಿದಿದೆ. ಈ ವೇಳೆ ಕೆಲ ಆಟಗಾರರು ತಮ್ಮ ತಲೆಯನ್ನು ಹಿಡಿದುಕೊಂಡು ಮೈದಾನದಲ್ಲೇ ಕುಸಿದು ಬಿದ್ದರು. 

ಇದನ್ನು ಗಮನಿಸಿದ ಇತರ ಆಟಗಾರರು ಮತ್ತು ಕೋಚ್ ಆಟಗಾರರ ಬಳಿ ಹೋಗಿ ವಿಚಾರಿಸಿದ್ದಾರೆ. ನಂತರ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸಿಡಿಲು ಬಡಿದಿರುವ ವಿಡಿಯೋವನ್ನು ಜಮೈಕಾ ಕ್ಲೀನರ್ ಎಂಬ ಟ್ವೀಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com