ಕಾಮನ್ವೆಲ್ತ್ ಗೇಮ್ಸ್:ಮಂಗಳೂರಿನ ಋತ್ವಿಕ್ ಗೆ ಅವಳಿ ಚಿನ್ನ

ಕೆನಡಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್​​ ಚಾಂಪಿಯನ್‌ಶಿಪ್ 83 ಕೆ.ಜಿ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ವಿಪ್ಡ್  ವಿಭಾಗದಲ್ಲಿ ಭಾರತದ ಋತ್ವಿಕ್ ಅಲೆವೂರಾಯ ಕೆ.ವಿ. ಇಂದು ಎರಡು ಚಿನ್ನದ ಪದಕ‌ ಮುಡಿಗೇರಿಸಿಕೊಂಡಿದ್ದಾರೆ. 

Published: 18th September 2019 03:39 PM  |   Last Updated: 18th September 2019 03:40 PM   |  A+A-


ಋತ್ವಿಕ್

Posted By : Raghavendra Adiga
Source : UNI

ಮಂಗಳೂರು: ಕೆನಡಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್​​ ಚಾಂಪಿಯನ್‌ಶಿಪ್ 83 ಕೆ.ಜಿ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ವಿಪ್ಡ್  ವಿಭಾಗದಲ್ಲಿ ಭಾರತದ ಋತ್ವಿಕ್ ಅಲೆವೂರಾಯ ಕೆ.ವಿ. ಇಂದು ಎರಡು ಚಿನ್ನದ ಪದಕ‌ ಮುಡಿಗೇರಿಸಿಕೊಂಡಿದ್ದಾರೆ. 

ಇವರು ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾರೆ. ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಋತ್ವಿಕ್ ಅವರು ವಾಸುದೇವ ಭಟ್ ಕುಂಜತ್ತೋಡಿ ಮತ್ತು ದೀಪಾ ದಂಪತಿ ಪುತ್ರ. 

ಋತ್ವಿಕ್ ಅವರ ತರಬೇತುದಾರ ಮಂಗಳೂರಿನ ಉರ್ವಾಸ್ಟೋರ್ ನವರಾದ  ಪ್ರದೀಪ್ ಕುಮಾರ್ ಆಚಾರ್ಯ ಅವರು ಕೂಡ ಇದೇ ಕೂಟದಲ್ಲಿ ಮಂಗಳವಾರ ನಡೆದ 83 ಕೆ.ಜಿ.ವಿಭಾಗದ ಹಿರಿಯರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.  ಒಂದೇ ಕ್ರೀಡಾಕೂಟದಲ್ಲಿ ಗುರು ಶಿಷ್ಯರು ಚಿನ್ನದ ಪದಕ ಗೆದ್ದ ಅಪೂರ್ವ ಸಾಧನೆ ಇದಾಗಿದೆ.

Stay up to date on all the latest ಕ್ರೀಡೆ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp