ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ ಅಮಿತ್ ಪಂಗಾಲ್

ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ಶನಿವಾರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್ ನಲ್ಲಿ ಬೆಳ್ಳಿ ಪದಕ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಅಮಿತ್ ಪಂಗಾಲ್
ಅಮಿತ್ ಪಂಗಾಲ್

ಎಕಟರಿನ್ ಬರ್ಗ್ ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ಶನಿವಾರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್ ನಲ್ಲಿ ಬೆಳ್ಳಿ ಪದಕ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಪಂಗಾಲ್ ಉಜ್ಬೇಕಿಸ್ತಾನ್‌ನ ಶಾಖೋಬಿದಿನ್ ಜೊಯಿರೊವ್ ಅವರಿಗೆ 5: 0 ರ ಅಂತರದಿಂದ ಮಣಿದು ಬೆಳ್ಳಿ ಪದಕವನ್ನು ಕೊರಳಿಗೆ ಹಾಕಿಕೊಂಡರು.

ವಿಶ್ವ ಚಾಂಪಿಯನ್‌ಶಿಪ್‌ನ ಒಂದೇ ಆವೃತ್ತಿಯಲ್ಲಿ ವೇದಿಕೆಯ ಮೇಲೆ ಒಂದಕ್ಕಿಂತ ಹೆಚ್ಚು ಭಾರತೀಯ ಬಾಕ್ಸರ್ ಸ್ಥಾನ ಗಳಿಸಿದ್ದು ಇದೇ ಮೊದಲಾಗಿದ್ದು ಳೆದ ಆವೃತ್ತಿಯಲ್ಲಿ, ಗೌರವ್ ಬಿಧುರಿ ಮಾತ್ರವೇ ಕಂಚಿನ ಪದಕವನ್ನು ಗೆಲ್ಲುವ ಸಾಧನೆ ಮಾಡಿದ್ದರು. ಆದರೆ ಈ ಬಾರಿ ಮನೀಶ್ ಕೌಶಿಕ್ (63 ಕೆಜಿ) ಕ್ಯೂಬಾದ ಆಂಡಿ ಕ್ರೂಜ್ ವಿರುದ್ಧ ಸೋತ ನಂತರ ಕಂಚು ಗೆದ್ದಿದ್ದರು ಮತ್ತೀಗ ಪಂಗಾಲ್ ಸಹ ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್ಸ್ ನಲ್ಲಿ ಅಮಿತ್ ಝಕಿಸ್ತಾನದ ಸಾಕೆನ್ ಬಿಬೋಸಿನೋವ್ ವಿರುದ್ಧ  3-2 ಅಂತರದಲ್ಲಿ ಗೆದ್ದು ಫೈನಲ್ಸ್ ತಲುಪಿದ್ದರು. ಈ ಮೂಲಕ ಅವರು ಇಂತಹಾ ಸಾಧನೆ ಮಾಡಿದ ಮೊದಲ ಭಾರತೀಯನೆನಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com