ವಿಶ್ವಕುಸ್ತಿ: ರಾಹುಲ್ ಅವೇರ್ ಗೆ ಕಂಚು

ಭಾರತೀಯ ಕುಸ್ತಿಪಟು ರಾಹುಲ್ ಅವೇರ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇದಕ್ಕೆ ಮುನ್ನ ಯುವ ಕ್ರೀಡಾಪಟು ದೀಪಕ್ ಪುನಿಯಾ ಬೆಳ್ಳಿ ಗಳಿಸಿ ಗಾಯದ ಸಮಸ್ಯೆಯಿಂದಾಗಿ ಫೈನಲ್ಸ್ ನಿಂದ ಹೊರಬಂದಿದ್ದರು. 
ರಾಹುಲ್ ಅವೇರ್
ರಾಹುಲ್ ಅವೇರ್

ನೂರ್-ಸುಲ್ತಾನ್ (ಕಝಕಿಸ್ತಾನ):  ಭಾರತೀಯ ಕುಸ್ತಿಪಟು ರಾಹುಲ್ ಅವೇರ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇದಕ್ಕೆ ಮುನ್ನ ಯುವ ಕ್ರೀಡಾಪಟು ದೀಪಕ್ ಪುನಿಯಾ ಬೆಳ್ಳಿ ಗಳಿಸಿ ಗಾಯದ ಸಮಸ್ಯೆಯಿಂದಾಗಿ ಫೈನಲ್ಸ್ ನಿಂದ ಹೊರಬಂದಿದ್ದರು.

ರಾಹುಲ್ 61 ಕೆಜಿ ವಿಭಾಗದಲ್ಲಿ 2017ರ ಪ್ಯಾನ್-ಅಮೇರಿಕಾ ಚಾಂಪಿಯನ್ ಟೈಲರ್ ಲೀ ಗ್ರಾಫ್ ಅವರನ್ನು 11-4 ಅಂತರದಿಂದ  ಹಿಂದಿಕ್ಕಿ ಕಂಚಿನ ಪದಕ ಗಳಿಸಿಕೊಳ್ಳುವ ಮೂಲಕ ಭಾರತದ ಪದಕಗಳ ಸಂಖ್ಯೆಯನ್ನು ಐದಕ್ಕೆ ಹೆಚ್ಚಿಸಿದ್ದಾರೆ.

ಇದಕ್ಕೆ ಹಿಂದೆ ಭಾರತ  2013 ರಲ್ಲಿಅಮೀರ್ ದಾಹಿಯಾ (ಬೆಳ್ಳಿ), ಭಜರಂಗ್ ಪುನಿಯಾ (ಕಂಚು) ಮತ್ತು ಸಂದೀಪ್ ತುಳಸಿ ಯಾದವ್ (ಗ್ರೀಕೋ-ರೋಮನ್‌ನಲ್ಲಿ ಕಂಚು) ಗಳಿಸಿದ ಸಾಧನೆ ಂಆಡಿತ್ತು. ಈ ಬಾರಿ ಮತ್ತೆರಡು ಹೆಚ್ಚುವರಿ ಪದಕ ಗಳಿಸಿ ಪದಕ ಪಟ್ಟಿಯಲ್ಲಿ ಭಡ್ತಿ ಪಡೆದಿದೆ.

ಮಹಾರಾಷ್ಟ್ರದ ರಾಹು;ಲ್ ಈ ಹಿಂದೆ  2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ (2009, 2011) ಎರಡು ಕಂಚಿನ ಪದಕ ಗಳಿಸಿಕೊಂಡಿದ್ದರು./

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com