ಶಾಕಿಂಗ್ ಸುದ್ದಿ: ಪಿ. ವಿ. ಸಿಂಧು ಕೋಚ್ ರಾಜೀನಾಮೆ!

ಟೊಕಿಯೋ ಒಲಿಂಪಿಕ್ಸ್ ಗೆ ಒಂದು ವರ್ಷಗಳಿಗಿಂತಲೂ ಕಡಿಮೆ ದಿನ ಬಾಕಿ ಇರುವಂತೆಯೇ ಭಾರತೀಯ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕೋಚ್ ಸ್ಥಾನಕ್ಕೆ  ದಕ್ಷಿಣ ಕೊರಿಯಾದ ಕಿಮ್ ಜಿ  ಹ್ಯುನ್ ರಾಜೀನಾಮೆ ನೀಡಿದ್ದಾರೆ.
ಪಿ. ವಿ. ಸಿಂಧು ಕೋಚ್ ಕಿಮ್ ಜಿ ಹ್ಯುನ್
ಪಿ. ವಿ. ಸಿಂಧು ಕೋಚ್ ಕಿಮ್ ಜಿ ಹ್ಯುನ್

ಹೈದ್ರಾಬಾದ್:  ಟೊಕಿಯೋ ಒಲಿಂಪಿಕ್ಸ್ ಗೆ ಒಂದು ವರ್ಷಗಳಿಗಿಂತಲೂ ಕಡಿಮೆ ದಿನ ಬಾಕಿ ಇರುವಂತೆಯೇ ಭಾರತೀಯ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕೋಚ್ ಸ್ಥಾನಕ್ಕೆ  ದಕ್ಷಿಣ ಕೊರಿಯಾದ ಕಿಮ್ ಜಿ  ಹ್ಯುನ್ ರಾಜೀನಾಮೆ ನೀಡಿದ್ದಾರೆ.

ಕಳೆದ ತಿಂಗಳು ಸ್ವಿಟ್ಜರ್ಲೆಂಡ್ ನ ಬಾಸೆಲ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ  ಪಿ. ವಿ. ಸಿಂಧು ಚಿನ್ನ ಗೆಲ್ಲುವಲ್ಲಿ ಕಿಮ್ ಜಿ ಹ್ಯುನ್  ಪ್ರಮುಖ ಪಾತ್ರ ವಹಿಸಿದ್ದರು. 

ನ್ಯೂಜಿಲ್ಯಾಂಡ್ ನಲ್ಲಿರುವ ಕಿಮ್ ಜಿ ಹ್ಯೂನ್ ಪತಿ ರಿಚ್ಚಿ ಮಾರ್ ಪಾರ್ಶ್ವವಾಯು ಸಮಸ್ಯೆಯಿಂದ ನರಳುತ್ತಿದ್ದು, ಅವರು ಚೇತರಿಸಿಕೊಳ್ಳಲು 4ರಿಂದ 6 ತಿಂಗಳು ಹಿಡಿಯಲಿದೆ. ಅವರನ್ನು ನೋಡಿಕೊಳ್ಳಲು ಕಿಮ್ ಜಿ ಹ್ಯೂನ್ ಅಗತ್ಯವಿರುವುದರಿಂದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಭಾರತದ ಮುಖ್ಯ ರಾಷ್ಟ್ರೀಯ ಕೋಚ್ ಪುಲ್ಲೇಲಾ ಗೋಪಿಚಂದ್ ಹೇಳಿದ್ದಾರೆ.

ಪಿ. ವಿ. ಸಿಂಧು ಅವರ ಯಶಸ್ಸಿನಲ್ಲಿ ಕಿಮ್ ಜಿ ಹ್ಯುನ್ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಈ ಹಂತದಲ್ಲಿ ಕಿಮ್ ರಾಜೀನಾಮೆ ದುರದೃಷ್ಟಕರವಾಗಿದೆ. ಅವರ ಪತಿ ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಪಿ. ವಿ. ಸಿಂಧು ತಿಳಿಸಿದ್ದಾರೆ.

ಕಿಮ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೆ. ಶ್ರಮಪಟ್ಟು ಕೆಲಸ ಮಾಡುತ್ತೇನೆ. ಗೋಪಿ ಸರ್ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜೊತೆಗಿದೆ. ಅಗತ್ಯ ಬಿದ್ದರೆ ಪುರುಷರ ಸಿಂಗಲ್ಸ್ ಕೋಚ್ ನೆರವು ಪಡೆಯುವುದಾಗಿ ಪಿ. ವಿ. ಸಿಂಧು ಹಾಗೂ ಆಕೆಯ ತಂದೆ ಪಿ.ವಿ. ರಾಮಣ್ಣ ತಿಳಿಸಿದ್ದಾರೆ.

ವಿಶೇಷವೆಂದರೆ ಯಾವುದೇ ದೂರು ಇಲ್ಲದೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿದೇಶಿ ಕೋಚ್ ಗಳ ಪೈಕಿ ಕಿಮ್  ಮೂರನೇಯವರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com