ಬಾಕ್ಸಿಂಗ್ ರಿಂಗ್‌ನಲ್ಲಿ ಒಂದೇ ಪವರ್ ಪಂಚ್‌ಗೆ ಕುಸಿದು ಬಿದ್ದು ಬಾಕ್ಸರ್ ಸಾವು, ಭಯಾನಕ ವಿಡಿಯೋ!
ಬ್ಯಾಟ್ಸ್ ಮನ್ ಗಳು ಕಾದು ಕಾದು ಅಪರೂಪಕ್ಕೆ ಸಿಕ್ಸರ್ ಹೊಡೆಯುವಂತೆ ಬಾಕ್ಸರ್ ಒಬ್ಬ ಹೊಡೆದ ಒಂದೇ ಒಂದು ಪವರ್ ಪಂಚ್‌ಗೆ ಎದುರಾಳಿ ಮಕಾಡೆ ಮಲಗಿರುವ ಭಯಾನಕ ಘಟನೆ ನಡೆದಿದೆ.
Published: 25th September 2019 12:20 PM | Last Updated: 25th September 2019 12:58 PM | A+A A-

ಬೋರಿಸ್ ಸ್ಟಾನ್ಕೋವ್
ಬ್ಯಾಟ್ಸ್ ಮನ್ ಗಳು ಕಾದು ಕಾದು ಅಪರೂಪಕ್ಕೆ ಸಿಕ್ಸರ್ ಹೊಡೆಯುವಂತೆ ಬಾಕ್ಸರ್ ಒಬ್ಬ ಹೊಡೆದ ಒಂದೇ ಒಂದು ಪವರ್ ಪಂಚ್‌ಗೆ ಎದುರಾಳಿ ಮಕಾಡೆ ಮಲಗಿರುವ ಭಯಾನಕ ಘಟನೆ ನಡೆದಿದೆ.
ಬಾಕ್ಸಿಂಗ್ ರಿಂಗ್ ನಲ್ಲಿ ಅರ್ದಿತ್ ಮುರ್ಜಾ ಮತ್ತು ಬಲ್ಗೇರಿಯಾದ ಬಾಕ್ಸರ್ ಬೋರಿಸ್ ನಡುವೆ ರೋಚಕ ಕಾದಾಟ ನಡೆದಿತ್ತು. ಎದುರಾಳಿ ಸ್ವಲ್ಪ ವೀಕ್ ಆಗಿದ್ದನ್ನು ಕಂಡ ಮುರ್ಜಾ ಬೋರಿಸ್ ಫೆದರ್ ವೈಟ್ ಗೆ ಬಲವಾದ ಪಂಚ್ ನೀಡಿದ್ದಾರೆ.
ಬೋರಿಸ್ ವೃತ್ತಿಪರ ಬಾಕ್ಸರ್ ಅಲ್ಲದಿದ್ದರು ತನ್ನ ಸೋದರ ಸಂಬಂಧಿಯ ಪರವಾನಗಿಯನ್ನು ಬಳಸಿಕೊಂಡು ಬಾಕ್ಸಿಂಗ್ ರಿಂಗ್ ಗೆ ಎಂಟ್ರಿ ಕೊಟ್ಟಿದ್ದ ಎಂದು ತಿಳಿದುಬಂದಿದೆ.
ಮುರ್ಜಾರ ಪವರ್ ಪಂಚ್ ನಿಂದಾಗಿ ಕುಸಿದು ಬಿದ್ದ ಬೋರಿಸ್ ಮತ್ತೇ ಏಳಲೇ ಇಲ್ಲ. ಮೊದಲಿಗೆ ಪ್ರಜ್ಞೆ ತಪ್ಪಿರಬಹುದು ಎಂದು ಭಾವಿಸಲಾಗಿತ್ತು. ಬೋರಿಸ್ ನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಇದರೊಂದಿಗೆ ಬಾಕ್ಸಿಂಗ್ ರಿಂಗ್ ನಲ್ಲಿ ಬಲಿಯಾದ ಮೂರನೇ ಬಾಕ್ಸರ್ ಎಂದಾಗಿದೆ.