ಕೊರಿಯಾ ಓಪನ್: ಕಶ್ಯಪ್‌ಗೆ ಜಯ, ಪಿವಿ ಸಿಂಧು, ಪ್ರಣೀತ್, ಸೈನಾಗೆ ಸೋಲು

ಕೊರಿಯಾ ಓಪನ್ ಟೂರ್ನಿಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆ ಮಾಡಿರುವ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್ ಹಾಗೂ ಸೈನಾ ನೆಹ್ವಾಲ್ ನಿರಾಸೆ ಅನುಭವಿಸಿದ್ದು ಕಶ್ಯಪ್ ಭಾರತದ ಭರವಸೆಯಾಗಿ ಉಳಿದಿದ್ದಾರೆ.

Published: 25th September 2019 05:12 PM  |   Last Updated: 25th September 2019 05:12 PM   |  A+A-


P Kashyap-PV Sindhu

ಕಶ್ಯಪ್-ಪಿವಿ ಸಿಂಧು

Posted By : Vishwanath S
Source : UNI

ನವದೆಹಲಿ: ಕೊರಿಯಾ ಓಪನ್ ಟೂರ್ನಿಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆ ಮಾಡಿರುವ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್ ಹಾಗೂ ಸೈನಾ ನೆಹ್ವಾಲ್ ನಿರಾಸೆ ಅನುಭವಿಸಿದ್ದು ಕಶ್ಯಪ್ ಭಾರತದ ಭರವಸೆಯಾಗಿ ಉಳಿದಿದ್ದಾರೆ.

ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಸಿಂಧು 21-7, 22-24, 21-15 ರಿಂದ ಬಿವಾನ್ ಜೆಂಗ್ ವಿರುದ್ಧ  ಸೋಲು ಕಂಡರು.

ಮೊದಲ ಗೇಮ್ ನಲ್ಲಿ ಉತ್ತಮವಾಗಿ ಆಡಿದ ಸಿಂಧು ಗೆಲುವು ದಾಖಲಿಸಿದರು. ಎರಡನೇ ಗೇಮ್ ನಲ್ಲಿ ಉಭಯ ಆಟಗಾರ್ತಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು. ಅಂತಿಮವಾಗಿ ಎರಡು ಗೇಮ್ ಪಾಯಿಂಟ್ ಕಲೆ ಹಾಕಿದ ಬಿವಾನ್ ಜೆಂಗ್ ಗೆಲವು ಸಾಧಿಸಿದರು. ಮೂರನೇ ಗೇಮ್ ನಲ್ಲೂ ಸಿಂಧು ಅಂಕ ಕಲೆ ಹಾಕುವಲ್ಲಿ ಹಿನ್ನಡೆ ಅನುಭವಿಸಿದರು.

ಕೊರಿಯಾ ಓಪನ್: ಸೈನಾಗೆ ನಿರಾಸೆ, ಕಶ್ಯಪ್‌ಗೆ ಜಯ!
ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಾರೆ. 

ಮಾಜಿ ನಂಬರ್ ಒನ್ ಆಟಗಾರ್ತಿ ಸೈನಾ 21-19, 18-21, 8-1 ರಿಂದ ಕೊರಿಯಾದ ಕಿಮ್ ಗಾ ಯುವಾನ್ ವಿರುದ್ಧ ನಿರಾಸೆ ಅನುಭವಿಸಿದರು. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸೈನಾ ಮೂರನೇ ಗೇಮ್ ನ್ನು ಅರ್ಧಕ್ಕೆ ಬಿಟ್ಟು ಹೊರ ನಡೆದರು. ಇದರಿಂದ ಕೊರಿಯಾ ಆಟಗಾರ್ತಿ ಕೈ ಮೇಲಾಯಿತು.

Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp