ಓಟದ ರಾಣಿ ಪಿಟಿ ಉಷಾಗೆ 'ವೆಟರನ್‌ ಪಿನ್‌ ಪ್ರಶಸ್ತಿ ಪ್ರಧಾನ

ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಲೆಜೆಂಡ್ ಪಿಟಿ ಉಷಾಗೆ ಪ್ರತಿಷ್ಠಿತ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ (ಐಎಎಎಫ್) ಕ್ರೀಡೆಯ ಬೆಳವಣಿಗೆಗೆ ನೀಡಿದ ಕೊಡುಗೆಗಾಗಿ ಬುಧವಾರ ವೆಟರನ್ ಪಿನ್ ಪ್ರಶಸ್ತಿ ನೀಡಿ ಗೌರವಿಸಿತು
ಓಟದ ರಾಣಿ ಪಿಟಿ ಉಷಾಗೆ 'ವೆಟರನ್‌ ಪಿನ್‌ ಪ್ರಶಸ್ತಿ ಪ್ರಧಾನ
ಓಟದ ರಾಣಿ ಪಿಟಿ ಉಷಾಗೆ 'ವೆಟರನ್‌ ಪಿನ್‌ ಪ್ರಶಸ್ತಿ ಪ್ರಧಾನ

ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಲೆಜೆಂಡ್ ಪಿಟಿ ಉಷಾಗೆ ಪ್ರತಿಷ್ಠಿತ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ (ಐಎಎಎಫ್) ಕ್ರೀಡೆಯ ಬೆಳವಣಿಗೆಗೆ ನೀಡಿದ ಕೊಡುಗೆಗಾಗಿ ಬುಧವಾರ ವೆಟರನ್ ಪಿನ್ ಪ್ರಶಸ್ತಿ ನೀಡಿ ಗೌರವಿಸಿತು.

ಐಎಎಎಫ್ ಮುಖ್ಯಸ್ಥ ಸೆಬಾಸ್ಟಿಯನ್ ಕೋ ಅವರು ಇಲ್ಲಿ 52ನೇ ಐಎಎಎಫ್ ಸಮಾವೇಶದ ಸಂದರ್ಭದಲ್ಲಿ ವೆಟರನ್ ಪಿನ್ ಅನ್ನು ಪ್ರಶಸ್ತಿ ವಿತರಿಸಿದರು.

"ದೋಹಾದಲ್ಲಿ ನಡೆದ 52 ನೇ ಐಎಎಎಫ್ ಸಮ್ಮೇಳನದಲ್ಲಿ ನನಗೆ  ವೆಟರನ್ ಪಿನ್ ಪ್ರಶಸ್ತಿ ನೀಡಿದ್ದಕ್ಕಾಗಿ ಐಎಎಎಫ್ ಮತ್ತು ಅಧ್ಯಕ್ಷ  ಸೆಬಾಸ್ಟಿಯನ್ ಕೋ ಅವರಿಗೆ ನನ್ನ ಹೃತ್ಪೂರ್ವ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಮ್ಮ ದೇಶದಲ್ಲಿ ಅಥ್ಲೆಟಿಕ್ಸ್ ಬೆಳವಣಿಗೆಗೆ ನಿರಂತರವಾಗಿ ಕೊಡುಗೆ ನೀಡಲು ನಾನುಸದಾ ಬಯಸುತ್ತೇನೆ!" ಉಷಾ ಬುಧವಾರ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಜೊತೆಗೆ, ಅವರು ಐಎಎಎಫ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಚಿತ್ರಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.

1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಉಷಾ ತನ್ನ ಅತ್ಯುನ್ನತ ಪ್ರದರ್ಶನಕ್ಕಾಗಿ ಜಾಗತಿಕ ಮನ್ನಣೆಗೆ ಪಾತ್ರರಾಗಿದ್ದರು ಅವರು 400 ಮೀ ಹರ್ಡಲ್ಸ್ ಫೈನಲ್‌ನಲ್ಲಿಕೇವಲ 1/100 ಸೆಕೆಂಡ್‌ನಿಂದ  ಕಂಚಿನ ಪದಕದಿಂದ ವಂಚಿತರಾದರು.

'ಪಯೋಲಿ ಎಕ್ಸ್‌ಪ್ರೆಸ್' ಎಂದು ಖ್ಯಾತವಾಗಿರುವ ಉಷಾ ಅವರಿಗೆ 1983 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನಿಡಲಾಗಿದ್ದು 1985 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com