ಕುಸ್ತಿ ರ್ಯಾಂಕಿಂಗ್ ಪಟ್ಟಿ: ದೀಪಕ್ ಪುನಿಯಾ ನಂ.1, ಎರಡನೇ ಸ್ಥಾನಕ್ಕಿಳಿದ ಭಜರಂಗ್ ಪೂನಿಯಾ

ವಿಶ್ವ ಚಾಂಪಿಯನ್‌ ಬೆಳ್ಳಿ ಪದಕ ವಿಜೇತ ಕುಸ್ತಿಪಟು ದೀಪಕ್ ಪುನಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಗಳಿಸಿದ್ದಾರೆ. 86 ಕೆಜಿ ವಿಭಾಗದಲ್ಲಿ ಅವರಿಗೆ ಈ ಸ್ಥಾನ ಪ್ರಾಪ್ತಿಯಾಗಿದೆ. 
ದೀಪಕ್ ಪುನಿಯಾ
ದೀಪಕ್ ಪುನಿಯಾ

ನವದೆಹಲಿ: ವಿಶ್ವ ಚಾಂಪಿಯನ್‌ ಬೆಳ್ಳಿ ಪದಕ ವಿಜೇತ ಕುಸ್ತಿಪಟು ದೀಪಕ್ ಪುನಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಗಳಿಸಿದ್ದಾರೆ. 86 ಕೆಜಿ ವಿಭಾಗದಲ್ಲಿ ಅವರಿಗೆ ಈ ಸ್ಥಾನ ಪ್ರಾಪ್ತಿಯಾಗಿದೆ.


ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್ ಹೊರಡಿಸಿರುವ ಇತ್ತೀಚಿನ ರ್ಯಾಂಕಿಂಗ್ ಪಟ್ಟಿಯಲ್ಲಿ ದೀಪಕ್ ಮೊದಲ ಸ್ಥಾನ ಗಳಿಸಿದರೆ 65 ಕೆಜಿ ವಿಭಾಗದಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಭಜರಂಗ್ ಪುನಿಯಾ ಕೆಳಗಿಳಿದಿದ್ದಾರೆ.


ಇತ್ತೀಚೆಗೆ ಹಿರಿಯರ ವಿಭಾಗದ ಕುಸ್ತಿ ಪಂದ್ಯ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ದೀಪಕ್ ಕಾಲು ನೋವಿನ ಸಮಸ್ಯೆಯಿಂದ ಇರಾನಿನ ಹಸನ್ ಯಜ್ದಾನಿ ವಿರುದ್ಧ ಅಂತಿಮ ಪಂದ್ಯದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 
20 ವರ್ಷದ ದೀಪಕ್ ಪುನಿಯಾ ಹಿಂದಿನ ವಿಶ್ವ ಚಾಂಪಿಯನ್ ಯಜ್ದಾನಿಗಿಂತ ನಾಲ್ಕು ಅಂಕ ಹೆಚ್ಚು ಗಳಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿದ್ದಾರೆ.


ಈ ವರ್ಷ ಇದುವರೆಗೆ ಆಡಿದ ವಿಶ್ವ ಚಾಂಪಿಯನ್ ಷಿಪ್ ಪಂದ್ಯಗಳಲ್ಲಿ ದೀಪಕ್ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ್ದಾರೆ. ಆಟದಲ್ಲಿ ಸತತ ಉತ್ತಮ ಸಾಧನೆ ತೋರಿಸಿಕೊಂಡು ಬಂದಿದ್ದರಿಂದ ಚಾಂಪಿಯನ್ ಷಿಪ್ ಪಟ್ಟ ಸಿಕ್ಕಿದೆ. 


ಇನ್ನೊಂದೆಡೆ 25 ವರ್ಷದ ಭಜರಂಗ್ ಪೂನಿಯಾ ಕಂಚಿನ ಪದಕ ಗಳಿಸಿದ್ದರಿಂದ ನಂಬರ್ 1 ಸ್ಥಾನದಿಂದ 2ನೇ ಸ್ಥಾನಕ್ಕೆ ಇಳಿದಿದ್ದಾರೆ.65 ಕೆಜಿ ವಿಭಾಗದಲ್ಲಿ ರಷ್ಯಾದ ಗಜ್ಡಿಮುರಡ್ ರಶಿಡೊವ್ ಚಾಂಪಿಯನ್ ಆಗಿದ್ದಾರೆ. 57 ಕೆಜಿ ವಿಭಾಗದಲ್ಲಿ ರವಿ ದಹಿಯಾ ಕಂಚು ಗೆದ್ದು ರ್ಯಾಂಕಿಂಗ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 


ಈ ಮಧ್ಯೆ ಮಹಿಳೆಯರ ರ್ಯಾಂಕಿಂಗ್ ಪಟ್ಟಿಯಲ್ಲಿ ವಿನೇಶ್ ಪೊಗಟ್ 53 ಕೆಜಿ ವಿಭಾಗದಲ್ಲಿ ನಂಬರ್ 2ನೇ ಸ್ಥಾನಕ್ಕೇರಿದ್ದಾರೆ. 50 ಕೆಜಿ ವಿಭಾಗದಲ್ಲಿ ಸೀಮಾ ಬಿಸ್ಲಾ ಮೂರನೇ ಸ್ಥಾನಕ್ಕೆ ಇಳಿದು, ಪೂಜಾ ದಾಂಡಾ 59 ಕೆಜಿ ವಿಭಾಗದಲ್ಲಿ 5ನೇ ರ್ಯಾಂಕ್ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com