ಒಲಂಪಿಕ್ಸ್ ಚಿನ್ನ ಗೆಲ್ಲುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ: ಮೇರಿ ಕೋಮ್

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ತಾವು ಭಾರತಕ್ಕಾಗಿ ಒಲಂಪಿಕ್ಸ್ ಚಿನ್ನ್ದ ಪದಕ ಪಡೆಯಬೇಕು ಅದಕ್ಕಾಗಿ ಗುರಿ ತಲುಪುವವರೆಗೆ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಮೇರಿ ಕೋಮ್
ಮೇರಿ ಕೋಮ್

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ತಾವು ಭಾರತಕ್ಕಾಗಿ ಒಲಂಪಿಕ್ಸ್ ಚಿನ್ನ್ದ ಪದಕ ಪಡೆಯಬೇಕು ಅದಕ್ಕಾಗಿ ಗುರಿ ತಲುಪುವವರೆಗೆ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಜಗತ್ತಿನ ಪ್ರಖ್ಯಾತ ಮಹಿಳಾ ಬಾಕ್ಸರ್ ಆಗಿರುವ ಮೇರಿ ಕೋಮ್  51 ಕೆಜಿ ವಿಭಾಗದಲ್ಲಿ 2012 ರ ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದ್ದರು. . 2016 ರಲ್ಲಿ ಆಕೆಗೆ ರಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ಕಳೆದ ತಿಂಗಳು, ಜೋರ್ಡಾನ್‌ನಲ್ಲಿ ನಡೆದ ಏಷ್ಯನ್ / ಓಷಿಯಾನಿಯಾ ಒಲಿಂಪಿಕ್ ಕ್ವಾಲಿಫೈಯರ್ಸ್‌ನಲ್ಲಿ ನಡೆದ ಮೆಗಾ ಕ್ವಾಡ್ರೆನಿಯಲ್ ಕ್ರೀಡಾಕೂಟದಲ್ಲಿ ಎರಡನೇ ಬಾರಿಗೆ ಒಲಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಟೋಕಿಯೊ ದಲ್ಲಿ ನಡೆಯಬೇಕಿದ್ದ ಈ ಕ್ರೀಡಾಕೂಟ ಕೊರೋನಾವೈರಸ್ ಹಾವಳಿಯ ಕಾರಣ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.

"ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಚಿನ್ನ ಗೆಲ್ಲುವುದು ನನ್ನ ಕನಸು. . ಈ ವಯಸ್ಸಿನಲ್ಲಿಯೂ ನಾನು ತುಂಬಾ ಶ್ರಮವಹಿಸುತ್ತಿದ್ದೇನೆ.ಒಲಿಂಪಿಕ್ಸ್‌ಗೆ ಮೊದಲ ಸ್ಥಾನದಲ್ಲಿ ಅರ್ಹತೆ ಪಡೆಯುವುದು ನನಗೆ ತುಂಬಾ ಕಷ್ಟಕರವಾಗಿತ್ತು" ಎಂದು ಮೇರಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಗಾಗಿ ಫೇಸ್‌ಬುಕ್ ಲೈವ್ ಸೆಷನ್‌ನಲ್ಲಿ ಹೇಳಿಕೊಂಡಿದ್ದಾರೆ.

"ವಿಶ್ವ ಚಾಂಪಿಯನ್‌ಶಿಪ್ ಅಥವಾ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಸಾಧಿಸಲು ನನಗೆ ಯಾವ  ರಹಸ್ಯ ಮಂತ್ರವಿಲ್ಲ. ನಾನು ಹೋರಾಟ ಮಾಡುತ್ತೇನೆ ಮತ್ತು ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಚಿನ್ನ ಗೆಲ್ಲುವವರೆಗೂ ನಾನು ಅದನ್ನು ಬಿಟ್ಟುಕೊಡುವುದಿಲ್ಲ" ಎಂದು ಅವರು ಹೇಳಿದರು. ಅಮ್ಮನ್‌ನಿಂದ ಹಿಂದಿರುಗಿದಾಗಿನಿಂದ, ಸರ್ಕಾರವು ವಿಧಿಸಿರುವ ರಾಷ್ಟ್ರವ್ಯಾಪಿ-ಲಾಕ್‌ಡೌನ್ ಮಧ್ಯೆ ಮೇರಿ ಕೋಮ್ ಮನೆಯಲ್ಲಿದ್ದಾರೆ. ಆದಾಗ್ಯೂ, ಜುಲೈ 23 ರಿಂದ ಆಗಸ್ಟ್ 9, 2021 ರವರೆಗೆ ನಡೆಯಲಿರುವ ಟೋಕಿಯೋ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆಲ್ಲುವತ್ತ ಗಮನ ಹರಿಸಿದ್ದಾರೆ.

"ನಾನು ಕ್ವಾರಂಟೈನ್ ನಲ್ಲಿದ್ದರೂ  ಸಹ, ನಾನು ಮನೆಯಲ್ಲಿಯೂ ಸಹ ನನ್ನ ಸಿದ್ಧತೆಗಳನ್ನು ಮುಂದುವರಿಸುತ್ತಿದ್ದೇನೆ. ನನ್ನ ಗುರಿಯನ್ನು ಸಾಧಿಸಲು ನಾನು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತೇನೆ.. ಕೆಲವೊಮ್ಮೆ ಮನೆಯಲ್ಲಿ ಅದು ಕಷ್ಟಕರವಾಗುತ್ತದೆ, ಆದರೆ ನನ್ನ ಕುಟುಂಬದೊಂದಿಗೆ  ನನ್ನ ಸಮಯವನ್ನು ನಾನು ಆನಂದಿಸುತ್ತೇನೆ "ಅವರು ಹೇಳಿದರು.

"ನನ್ನ ಕನಸನ್ನು ಈಡೇರಿಸಲು ನನಗೆ ಇಡೀ ರಾಷ್ಟ್ರದ ಆಶೀರ್ವಾದ ಮತ್ತು ಪ್ರೀತಿ ಬೇಕು" ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧವನ್ನು ಗೆಲ್ಲುವ ಸಲುವಾಗಿ ಮನೆಯೊಳಗೇ ಇರಲು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಮೇರಿ ಕೋಮ್ ಸಾರ್ವಜನಿಕರಲ್ಲಿ ಒತ್ತಾಯಪೂರ್ವಕ ಮನವಿ ಮಾಡಿದ್ದಾರೆ.

"ಈ ಸಾಂಕ್ರಾಮಿಕ ರೋಗವು ನಮ್ಮನ್ನು ನಾಶ ಮಾಡಲಿದೆ ದೆ ಎಂದು ನಾವು ನಿರೀಕ್ಷಿಸುತ್ತಿರಲಿಲ್ಲ ಆದರೆ ಈಗ ಅದು ಭಯಾನಕವಾಗಿ ಹರಡುತ್ತಿದೆ. ನಾವು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಬೇಕು.. ಕೊರೋನಾವೈರಸ್  ಹರಡುವುದನ್ನು ತಡೆಯಲು ಸರ್ಕಾರ ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡುವ ಅತ್ಯುತ್ತಮ ಮತ್ತು ಏಕೈಕ ಮಾರ್ಗ ಮನೆಯಲ್ಲಿಯೇ ಇರುವುದು "ಎಂದು ಅವರು ಹೇಳಿದರು. "ಇದು ಕಷ್ಟ ಎಂದು ನನಗೆ ತಿಳಿದಿದೆ ಆದರೆ ಇದೀಗ ಕಾಲದ ಅಗತ್ಯವಾಗಿದೆ. ಮ್ಮ ಸ್ವಂತ ಲಾಭಕ್ಕಾಗಿ ನಾವು ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು."

ರಾಜ್ಯಸಭಾ ಸಂಸದೆಯಾಗಿರುವ ಮೇರಿ ಕೋಮ್ ಇತ್ತೀಚೆಗೆ ತಮ್ಮ ಒಂದು ತಿಂಗಳ ಸಂಬಳವನ್ನು ಕೋವಿಡ್--19 ವಿರುದ್ಧದ ಸಮರಕ್ಕೆ  ಸ್ಥಾಪಿಸಿದ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದರು. ಇದಲ್ಲದೆ, ಕೊರೋನಾವೈರಸ್ ಪರಿಹಾರ ಕಾರ್ಯಗಳಿಗಾಗಿ ತನ್ನ ಎಂಪಿ ಲೋಕಲ್ ಏರಿಯಾ ಡೆವಲಪ್ಮೆಂಟ್ ಸ್ಕೀಮ್ (ಎಂಪಿಎಲ್ಎಡಿಎಸ್) ನಿಧಿಯಿಂದ 1 ಕೋಟಿ ರೂ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com