ಕೊರೋನಾ ಕಂಟಕ: ಭಾರತದಲ್ಲಿ ನಡೆಯಲಿದ್ದ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಮುಂದೂಡಿಕೆ

ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ  ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯಿಂದಾಗಿ ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಿ ಫಿಫಾ  ಫುಟ್‌ಬಾಲ್‌ನ ಆಡಳಿತ ಮಂಡಳಿ ಶನಿವಾರ  ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ  ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯಿಂದಾಗಿ ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಿ ಫಿಫಾ  ಫುಟ್‌ಬಾಲ್‌ನ ಆಡಳಿತ ಮಂಡಳಿ ಶನಿವಾರ  ಆದೇಶಿಸಿದೆ.

ನವೆಂಬರ್ 2 ರಿಂದ 21 ರವರೆಗೆ ಕೋಲ್ಕತಾ, ಗುವಾಹಟಿ, ಭುವನೇಶ್ವರ, ಅಹಮದಾಬಾದ್ ಮತ್ತು ನವೀ ಮುಂಬೈ ಸೇರಿದಂತೆ ದೇಶದ ಐದು ನಗರಗಳಲ್ಲಿ ಮಹಿಳಾ ಅಂಡರ್ -17 ವಿಶ್ವಕಪ್ ನಡೆಯಬೇಕಿತ್ತು.ಪಂದ್ಯಾವಳಿಯನ್ನು 16 ತಂಡಗಳ ನಡುವೆ ಆಯೋಜಿಸಲಾಗಿತ್ತು.

ಇದೇ ಮೊದಲ ಬಾರಿಗೆ ಭಾರತದಲ್ಲಿ  ಅಂಡರ್ -17 ಮಹಿಳಾ ವಿಶ್ವಕಪ್‌ ನಡೆಯುತ್ತಿತ್ತು. ಆದರೆ ಕೊರೋನಾವೈರಸ್ ದ ಪರಿಣಾಮಗಳನ್ನು ಪರಿಹರಿಸಲು ಫಿಫಾ-ಕಾನ್ಫೆಡರೇಶನ್ಸ್ ಕಾರ್ಯ ಸಮೂಹವು ಇತ್ತೀಚೆಗೆ ಫಿಫಾ ಕೌನ್ಸಿಲ್ ನ  ಬ್ಯೂರೋ ಈ ತೀರ್ಮಾನಕ್ಕೆ ಬಂದಿದೆ.    ಮೂಲತಃ ಫಿಫಾ ಅಂಡರ್ -20 ಮಹಿಳಾ ವಿಶ್ವಕಪ್ ಪನಾಮ / ಕೋಸ್ಟಾ ರಿಕಾ 2020 ಅನ್ನು ಮುಂದೂಡಲು ಕಾರ್ಯನಿರತ ಗುಂಪು ಶಿಫಾರಸು ಮಾಡಿದೆ - ಈ ಪಂದ್ಯಾವಳಿ  ಆಗಸ್ಟ್ / ಸೆಪ್ಟೆಂಬರ್ 2020ಕ್ಕೆ ನಿಗದಿಯಾಗಿತ್ತು.ತ್ತು ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಇಂಡಿಯಾ 2020 ನವೆಂಬರ್ ನಲ್ಲಿ ನಡೆಯುವುದಿತ್ತು.

ಇದೇ ವೇಳೆ "ಹೊಸ ದಿನಾಂಕಗಳನ್ನು ಮುಂದೆ ಪ್ರಕಟಿಸಲಾಗುವುದು"ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com