ರೊನಾಲ್ಡಿನೋ
ರೊನಾಲ್ಡಿನೋ

ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಜೈಲಿನಿಂದ ಬಿಡುಗಡೆ, ಗೃಹ ಬಂಧನ

ಪರಾಗ್ವೆಯ ನ್ಯಾಯಾಧೀಶರು ಗೃಹ ಬಂಧನದಲ್ಲಿರಲು ಅನುಮತಿಸಿದ ನಂತರ ಬ್ರೆಜಿಲ್ನ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಅವರನ್ನು ಪರಾಗ್ವೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

ಅಸುನ್ಸಿಯಾನ್: ಪರಾಗ್ವೆಯ ನ್ಯಾಯಾಧೀಶರು ಗೃಹ ಬಂಧನದಲ್ಲಿರಲು ಅನುಮತಿಸಿದ ನಂತರ ಬ್ರೆಜಿಲ್ನ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಅವರನ್ನು ಪರಾಗ್ವೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

ರೊನಾಲ್ಡಿನೊ ಮತ್ತು ಅವರ ಸಹೋದರ ರಾಬರ್ಟೊ ಎಸ್ಸಿಸ್ ಅವರನ್ನು ಅಸುನ್ಸಿಯಾನ್‌ನ ಮಧ್ಯಭಾಗದಲ್ಲಿರುವ ಹೋಟೆಲ್‌ಗೆ ವರ್ಗಾಯಿಸಲಾಗುವುದು, ಅಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಜಾಮೀನುಗಾಗಿ 1.6 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿದ ನಂತರ ಇಬ್ಬರೂ ಗೃಹಬಂಧನದಲ್ಲಿರುತ್ತಾರೆ. ಇಬ್ಬರು ಸಹೋದರರ ಹಿಂದಿನ ಮೂರು ಜಾಮೀನು ಕೋರಿಕೆಯನ್ನು ನ್ಯಾಯಾಧೀಶರು ಈ ಹಿಂದೆ ತಿರಸ್ಕರಿಸಿದ್ದರು.

ಜಾಮೀನು ದಂಡ ವಿಧಿಸುವುದು ಅಗತ್ಯ ಎಂದು ಅಭಿಯೋಜಕ ಉಸ್ಮರ್ ಲೆಗ್ಲೆ ಮಂಗಳವಾರ ಹೇಳಿದ್ದಾರೆ. ಈ ಮೊದಲು ವಿಚಾರಣೆಯಲ್ಲಿ, ಮನೆಯನ್ನು ಗ್ಯಾರಂಟಿಯಾಗಿ ನೀಡಲು ಪ್ರಸ್ತಾಪಿಸಲಾಗಿತ್ತು ಆದರೆ ಮನೆ ಇಬ್ಬರ ಹೆಸರಿನಲ್ಲಿ ಇರಲಿಲ್ಲ. ಈಗ ಇಬ್ಬರೂ ತಮ್ಮ ಖಾತೆಗಳ ಮೂಲಕ ಈ ಮೊತ್ತವನ್ನು ಜಮಾ ಮಾಡಿದ್ದಾರೆ.

ರೊನಾಲ್ಡಿನೊ ಮತ್ತು ರಾಬರ್ಟೊ ಪಾಲ್ಮರೋಗೊ ಹೋಟೆಲ್‌ನಲ್ಲಿ ಗೃಹಬಂಧನದಲ್ಲಿರುತ್ತಾರೆ ಮತ್ತು ಅಧಿಕಾರಿಗಳು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಪರಾಗ್ವೆ ರಾಜಧಾನಿಯಲ್ಲಿ ನಕಲಿ ಪಾಸ್‌ಪೋರ್ಟ್‌ನೊಂದಿಗೆ ಯಾಚ್ ರೆಸಾರ್ಟ್ ಮತ್ತು ಗಾಲ್ಫ್ ಕ್ಲಬ್‌ನಲ್ಲಿ ಅಧ್ಯಕ್ಷೀಯ ಸೂಟ್ ಮೇಲೆ ದಾಳಿ ನಡೆಸಿದ್ದಕ್ಕಾಗಿ ರೊನಾಲ್ಡಿನೊ (39) ಮತ್ತು ಆತನ ಸಹೋದರನನ್ನು ಮಾರ್ಚ್ 5 ರಂದು ಪೊಲೀಸರು ಬಂಧಿಸಿದ್ದರು. ರೊನಾಲ್ಡಿನೊ ಅವರು 2018 ರಲ್ಲಿ ಫುಟ್ಬಾಲ್‌ನಿಂದ ನಿವೃತ್ತರಾಗಿದ್ದರು.

Related Stories

No stories found.

Advertisement

X
Kannada Prabha
www.kannadaprabha.com