ಲಾಕ್ ಡೌನ್ ವೇಳೆ ಮನೆ ಖಾಲಿ ಮಾಡಿಸಿದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ಬೈಚುಂಗ್ ಭುಟಿಯಾ

ಲಾಕ್ ಡೌನ್ ಸಮಯದಲ್ಲಿ ಬಾಡಿಗೆದಾರನನ್ನು ಮನೆಯಿಂದ ಹೊರಹಾಕಿದ್ದಕ್ಕಾಗಿ ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಚುಂಗ್ ಭುಟಿಯಾ-ಸಂಗ್ರಹ ಚಿತ್ರ
ಬೈಚುಂಗ್ ಭುಟಿಯಾ-ಸಂಗ್ರಹ ಚಿತ್ರ

ಕೋಲ್ಕತ್ತಾ: ಲಾಕ್ ಡೌನ್ ಸಮಯದಲ್ಲಿ ಬಾಡಿಗೆದಾರನನ್ನು ಮನೆಯಿಂದ ಹೊರಹಾಕಿದ್ದಕ್ಕಾಗಿ ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿಕ್ಕಿಂ ನಿವಾಸಿ ಅಥಿನಾ ಲಿಂಬುಗೆ ಲಘು ಜ್ವರ ಬಂತು, ನಂತರ ಆಕೆಯ ಮನೆಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಕೇಳಿಕೊಂಡರು. ಅಥಿನಾ ಯಾರ ಸಹಾಯವಿಲ್ಲದೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಲೆದಾಡಿದಳು. ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ, ಭುಟಿಯಾ  ತನ್ನ ಸ್ನೇಹಿತರೊಂದಿಗೆ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. 

ಬಾಲಕಿಗೆ ಸರಳ ಜ್ವರ ಇದ್ದು, ಅವಳಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಮನೆ ಮಾಲೀಕರು ಮನೆ ಬಾಡಿಗೆಗೆ ಕೊಡಲು ನಿರಾಕರಿಸಿದರು.ಭೂಟಿಯಾ ಮತ್ತು ಅವನ ಸ್ನೇಹಿತರು ಬಾಲಕಿಗೆ ವೈದ್ಯಕೀಯ ನೆರವು ನೀಡಿ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಹುಡುಗಿ  ಚೇತರಿಸಿಕೊಂಡ ನಂತರ, ತಮ್ಮ ಬಾಡಿಗೆ ಮನೆಗೆ ತೆರಳಿದಾಗ ಮಾಲೀಕರು ಅವಳಿಗೆ ಮನೆಗೆ ಹೋಗಲು ಅನುಮತಿ ನೀಡಲಿಲ್ಲ. 

ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಭುಟಿಯಾ, 'ಇಂತಹ ಕಷ್ಟದ ಸಮಯದಲ್ಲೂ ಜನರು ಪರಸ್ಪರ ಸಹಾಯ ಮಾಡದಿರುವುದು ದುರದೃಷ್ಟಕರ. ಈ ಹುಡುಗಿ ಸಿಕ್ಕಿಂನಿಂದ ಬಂದಿದ್ದು, ಸಾಕಷ್ಟು ನೋವು ಅನುಭವಿಸಿದ್ದಾರೆ. ನಾನು ಪೊಲೀಸರನ್ನು ಸಂಪರ್ಕಿಸಿದ್ದೇನೆ. ಅವಳಿಗೆ  ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com