ಕೊರೋನಾ ವಿರುದ್ಧ ಹೋರಾಟ: ಹಣ ಸಂಗ್ರಹಕ್ಕೆ 'ಫನ್ ಫಿಟ್ನೆಸ್' ಸವಾಲು ಆರಂಭಿಸಿದ ಮಹಿಳಾ ಹಾಕಿ ತಂಡ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ವಲಸೆ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ ಭಾರತ ಮಹಿಳಾ ಹಾಕಿ ತಂಡ, 'ಫನ್ ಫಿಟ್ನೆಸ್ ಸವಾಲು ಒಡ್ಡುವ ಮೂಲಕ ಹಣ ಸಂಗ್ರಹಕ್ಕೆ  ಶುಕ್ರವಾರ ಚಾಲನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ವಲಸೆ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ ಭಾರತ ಮಹಿಳಾ ಹಾಕಿ ತಂಡ, 'ಫನ್ ಫಿಟ್ನೆಸ್ ಸವಾಲು ಒಡ್ಡುವ ಮೂಲಕ ಹಣ ಸಂಗ್ರಹಕ್ಕೆ  ಶುಕ್ರವಾರ ಚಾಲನೆ ನೀಡಿದೆ.

18 ದಿನಗಳ ಈ ಸವಾಲಿನ ಮೂಲಕ ಕನಿಷ್ಠ ಒಂದು ಸಾವಿರ ಕುಟುಂಬಗಳ ಆಹಾರಕ್ಕಾಗಿ ಹಣ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಜತೆಗೆ ಮೇ 3ರವರೆಗೆ ವಿಸ್ತರಿಸಲಾಗಿರುವ ದೇಶವ್ಯಾಪಿ ಲಾಕ್ ಡೌನ್ ಸಂದರ್ಭದಲ್ಲಿ ಜೀವನ ಶೈಲಿ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಬಗ್ಗೆ  ಉತ್ತೇಜಿಸುವುದು ಇದರ ಮತ್ತೊಂದು ಉದ್ದೇಶವಾಗಿದೆ. ಈ ಬಗ್ಗೆ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, 'ಪ್ರತಿದಿನ ನಾವು ಅನೇಕ ಜನರು ಆಹಾರಕ್ಕಾಗಿ ಹೆಣಗಾಡುತ್ತಿರುವ ಬಗ್ಗೆ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಓದುತ್ತಿದ್ದೇವೆ, ಈ ಜನರಿಗೆ  ತಂಡವಾಗಿ ಸಹಾಯ ಮಾಡಲು ನಾವು ಏನಾದರೂ ಮಾಡಲು ನಿರ್ಧರಿಸದೆವು ಎಂದು ಹಾಕಿ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com