'ಐ ಆ್ಯಮ್ ಬ್ಯಾಡ್ಮಿಂಟನ್' ಪ್ರಚಾರ ರಾಯಭಾರಿಯಾಗಿ ವಿಶ್ವ ಚಾಂಪಿಯನ್ ಪಿವಿ ಸಿಂಧೂ ನೇಮಕ

ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ (ಬಿಡಬ್ಲ್ಯುಎಫ್) ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ ಅವರನ್ನು ತನ್ನ 'ಐ ಆ್ಯಮ್ ಬ್ಯಾಡ್ಮಿಂಟನ್ 'ಜಾಗೃತಿ ಅಭಿಯಾನದ ರಾಯಭಾರಿಗಳಲ್ಲಿ ಒಬ್ಬರಾಗಿ ಬುಧವಾರ ಹೆಸರಿಸಿದೆ.
ಪಿವಿ ಸಿಂಧೂ
ಪಿವಿ ಸಿಂಧೂ

ಕೌಲಾಲಂಪುರ(ಮಲೇಷ್ಯಾ): ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ (ಬಿಡಬ್ಲ್ಯುಎಫ್) ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ ಅವರನ್ನು ತನ್ನ 'ಐ ಆ್ಯಮ್ ಬ್ಯಾಡ್ಮಿಂಟನ್ 'ಜಾಗೃತಿ ಅಭಿಯಾನದ ರಾಯಭಾರಿಗಳಲ್ಲಿ ಒಬ್ಬರಾಗಿ ಬುಧವಾರ ಹೆಸರಿಸಿದೆ.

ಈ ಅಭಿಯಾನವು ಆಟಗಾರರನ್ನು ಬ್ಯಾಡ್ಮಿಂಟನ್ ಕುರಿತು ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು ಮತ್ತು ಸ್ವಚ್ಛ ಹಾಗೂ ಪ್ರಾಮಾಣಿಕ ಆಟಕ್ಕೆ ಪ್ರತಿಪಾದಿಸುವ ಮೂಲಕ ಬದ್ಧರಾಗುವ ವೇದಿಕೆಯನ್ನು ಒದಗಿಸುತ್ತದೆ. ಯಾವುದೇ ಕ್ರೀಡೆಯಲ್ಲಿ ಸ್ವಚ್ಛ ಮತ್ತು ಪ್ರಾಮಾಣಿಕತೆಯ ಆಟವಾಡುವುದು ಬಹಳ ಮುಖ್ಯ ಎಂದು 24 ವರ್ಷದ ಷಟ್ಲರ್ ಸಿಂಧೂ ಹೇಳಿದ್ದಾರೆ. 

'ಈ ಸಂದೇಶ ಒಂದೇ ಧ್ವನಿಯಲ್ಲಿ ಆರಂಭವಾಗುತ್ತದೆ. ನಾವು ರಾಯಭಾರಿಗಳಾಗಿ ಇದನ್ನು ಪ್ರಚಾರ ಮಾಡಲು ಸಾಧ್ಯವಾದರೆ, ಇದು ಮತ್ತಷ್ಟು ಆಟಗಾರರಿಗೆ ಹರಡುತ್ತದೆ ಎಂದು ನಾವು ಭಾವಿಸುತ್ತೇನೆ. ನೀವು ನಿಮಗಾಗಿ ಕ್ರೀಡೆಯನ್ನು ಆಡುತ್ತಿದ್ದೀರಿ. ನೀವು ಅದರ ಬಗ್ಗೆ ಸಂತೋಷವಾಗಿರಬೇಕು. ನೀವು ಅದನ್ನು ತುಂಬಾ ಸ್ವಚ್ಛವಾಗಿ ಆಡಬೇಕು. ಅದು ನನಗೆ ಬಹಳ ಮುಖ್ಯ, ' ಎಂದು  ಸಿಂಧೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com