ವಿಶ್ವ ಅಥ್ಲೆಟಿಕ್ಸ್ ನಿಂದ 500,000 ಡಾಲರ್ ಕೋವಿಡ್-19 ವಿಪತ್ತು ನಿಧಿ, ಕ್ರೀಡಾಪಟುಗಳಿಗೆ ನೆರವಿನ ಹಸ್ತ

ವಿಶ್ವ ಅಥ್ಲೆಟಿಕ್ಸ್ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೌಂಡೇಷನ್ (ಐಎಎಫ್) ಜಂಟಿಯಾಗಿ 500,000 ಡಾಲರ್ ಮೊತ್ತದ ಕೋವಿಡ್-19 ವಿಪತ್ತು ನಿಧಿಯನ್ನು ಸ್ಥಾಪಿಸಿವೆ. 
ವಿಶ್ವ ಅಥ್ಲೆಟಿಕ್ಸ್ ನಿಂದ 500,000 ಡಾಲರ್ ಕೋವಿಡ್-19 ವಿಪತ್ತು ನಿಧಿ, ಕ್ರೀಡಾಪಟುಗಳಿಗೆ ನೆರವಿನ ಹಸ್ತ
ವಿಶ್ವ ಅಥ್ಲೆಟಿಕ್ಸ್ ನಿಂದ 500,000 ಡಾಲರ್ ಕೋವಿಡ್-19 ವಿಪತ್ತು ನಿಧಿ, ಕ್ರೀಡಾಪಟುಗಳಿಗೆ ನೆರವಿನ ಹಸ್ತ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೌಂಡೇಷನ್ (ಐಎಎಫ್) ಜಂಟಿಯಾಗಿ 500,000 ಡಾಲರ್ ಮೊತ್ತದ ಕೋವಿಡ್-19 ವಿಪತ್ತು ನಿಧಿಯನ್ನು ಸ್ಥಾಪಿಸಿವೆ. 

ಕೋವಿಡ್-19 ರಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಈ ನಿಧಿಯಿಂದ ಕ್ರೀಡಾಪಟುಗಳಿಗೆ ನೆರವು ನೀಡಲಾಗುತ್ತದೆ ಎಂದು ಈ ಎರಡೂ ಸಂಸ್ಥೆಗಳು ತಿಳಿಸಿವೆ.

ಕೊರೋನಾ ವೈರಸ್ ಹರಡುವಿಕೆ ವಿಶ್ವಾದ್ಯಂತ ಕ್ರೀಡಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದ್ದು, ಕ್ರೀಡಾಪಟುಗಳ ಆದಾಯಕ್ಕೆ ಹೊಡೆತ ಬಿದ್ದಿದೆ.  

ನೆರವಿಗಾಗಿ ಸಲ್ಲಿಸಲಾಗುವ ಅರ್ಜಿಗಳ ಮೌಲ್ಯಮಾಪನವನ್ನು ವಿಶ್ವ ಅಥ್ಲೆಟಿಕ್ಸ್ ನ ಅಧ್ಯಕ್ಷ ಸೆಬಾಸ್ಟಿಯನ್ ಕೋ ನಡೆಸಲಿದ್ದಾರೆ. ಈ ತಂಡ ಈ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಲಿದ್ದು, ಹೆಚ್ಚುವರಿ ಹಣವನ್ನು ಸಂಗ್ರಹಿಸುವುದು ಹೇಗೆ ಎಂಬ ಬಗ್ಗೆ ತೀರ್ಮಾನಿಸಲಿದೆ.  
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com