ಅರ್ಜುನ ಪುರಸ್ಕೃತ ಶಟ್ಲರ್ ಸಾತ್ವಿಕ್ ಸಾಯಿರಾಜ್‌ಗೆ ಕೋವಿಡ್ ಸೋಂಕು

ಭಾರತದ ಖ್ಯಾತ ಶಟ್ಲರ್ ಹಾಗೂ ಅರ್ಜುನ ಪುರಸ್ಕೃತ ಸಾತ್ವಿಕ್ ಸಾಯಿರಾಜ್‌ಗೆ ಕೋವಿಡ್-19 ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.

Published: 27th August 2020 07:27 PM  |   Last Updated: 27th August 2020 07:27 PM   |  A+A-


Satwiksairaj Rankireddy

ಸಾತ್ವಿಕ್ ಸಾಯಿರಾಜ್‌

Posted By : Srinivasamurthy VN
Source : PTI

ನವದೆಹಲಿ: ಭಾರತದ ಖ್ಯಾತ ಶಟ್ಲರ್ ಹಾಗೂ ಅರ್ಜುನ ಪುರಸ್ಕೃತ ಸಾತ್ವಿಕ್ ಸಾಯಿರಾಜ್‌ಗೆ ಕೋವಿಡ್-19 ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ 20 ವರ್ಷದ ಡಬಲ್ಸ್‌ ಆಟಗಾರ ಸಾತ್ವಿಕ್ ಅವರಿಗೆ ಲಕ್ಷಣರಹಿತ ಸೋಂಕು ತಗುಲಿದ್ದು, ಅವರನ್ನು ಕಳೆದ ಒಂದು ವಾರದಿಂದ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಹೈದರಾಬಾದ್ ಸಮೀಪದ ಅಮಲಾಪುರಂನಲ್ಲಿರುವ ತಮ್ಮ ಮನೆಯಲ್ಲಿಯೇ ಅವರು ಕ್ವಾರಂಟೈನ್ ಆಗಿದ್ದಾರೆ.

ಈ ಬಗ್ಗೆ ಖುದ್ಧು ಮಾಹಿತಿ ನೀಡಿರುವ ಸಾತ್ವಿಕ್, 'ಹೌದು ಇದು ನಿಜಸಂಗತಿ. ಕಳೆದವಾರ ಆ್ಯಂಟಿಜೆನ್ ಟೆಸ್ಟ್‌ ಮಾಡಿಸಿಕೊಂಡಾಗ ಸೋಂಕು ಇರುವುದು ತಿಳಿದಿತ್ತು. ಐದು ದಿನಗಳಿಂದ ಪ್ರತ್ಯೇಕವಾಸದಲ್ಲಿದ್ದೇನೆ. ಆರ್‌ಟಿ-ಪಿಸಿಆರ್‌ ಟೆಸ್ಟ್ ನಲ್ಲಿಯೂ ಸೋಂಕು ಖಚಿತಪಟ್ಟಿದೆ. ನಾನು ಔಷಧೋಪಚಾರ ಪಡೆಯುತ್ತಿದ್ದೇನೆ.  ಇಲ್ಲಿಯವರೆಗೆ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ. ನನ್ನ ಪಾಲಕರು ಮತ್ತು ಸ್ನೇಹಿತರಲ್ಲಿಯೂ ವೈರಸ್‌ ಸೋಂಕು ಕಂಡುಬಂದಿಲ್ಲ. ಆದರೂ ನನಗೆ ಎಲ್ಲಿಂದ ಸೋಂಕು ತಗುಲಿತು ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಕಳೆದ ಶನಿವಾರ ಪ್ರಕಟವಾಗಿದ್ದ ರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ಬ್ಯಾಡ್ಮಿಂಟನ್ ವಿಭಾಗದ ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸಾತ್ವಿಕ್ ಹೆಸರು ಕೂಡ ಇತ್ತು. ಅರ್ಜುನ ಮತ್ತು ಇತರ ರಾಷ್ಟ್ರೀಯ ಪುರಸ್ಕಾರಗಳ ಪ್ರದಾನ ಸಮಾರಂಭವನ್ನು ಈ ಬಾರಿ ಆನ್‌ಲೈನ್‌  (ವರ್ಚುವಲ್) ವೇದಿಕೆಯಲ್ಲಿ  ನಡೆಸಲಾಗುತ್ತಿದೆ.  ಶನಿವಾರ ಕಾರ್ಯಕ್ರಮ ನಡೆಯುತ್ತದೆ.

Stay up to date on all the latest ಕ್ರೀಡೆ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp