ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಗೆ ಕೊರೋನಾ, ಖೇಲ್ ರತ್ನ ಪುರಸ್ಕಾರ ಸಮಾರಂಭಕ್ಕೆ ಗೈರು

ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ,  2020ರ ಖೇಲ್ ರತ್ನ ಪ್ರಶಸ್ತಿ ವಿಜೇತರಾದ ವಿನೇಶ್ ಫೋಗಟ್  ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.
ವಿನೇಶ್ ಫೋಗಟ್
ವಿನೇಶ್ ಫೋಗಟ್

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ,  2020ರ ಖೇಲ್ ರತ್ನ ಪ್ರಶಸ್ತಿ ವಿಜೇತರಾದ ವಿನೇಶ್ ಫೋಗಟ್  ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.  ಕೋವಿಡ್ ಸೋಂಕು ತಗುಲಿದ ಕಾರಣ ಇಂದು ( ಆಗಸ್ಟ್ 29) ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ತನ್ನ  ಕೋವಿಡ್ ವರದಿ ಇಂದು ಹೊರಬಂದಿದ್ದು ನನಗೆ ಯಾವರೋಗಲಕ್ಷಣವಿಲ್ಲ ಎಂದು ವಿನೇಶ್ ಹೇಳಿದ್ದಾರೆ.

"ನನಗೆ ಈಗ ಯಾವುದೇ ಲಕ್ಷಣಗಳಿಲ್ಲ, ಆದರೆ ನನ್ನ ಪರೀಕ್ಷಾ ಫಲಿತಾಂಶ ಪಾಸಿಟಿವ್ ಆಗಿದೆ.  ಎಂದು ವಿನೇಶ್ ದೃಢಪಡಿಸಿದ್ದಾರೆ.

ಶನಿವಾರ ಈ ಸಾಲಿನ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಲಿದ್ದು ಖೇಲ್ ರತ್ನವನ್ನು ವರ್ಚುವಲ್ ಸಮಾರಂಭದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಲು ಸೋನೆಪಥ್ ನ  ಎಸ್‌ಎಐ ಗೊತ್ತುಪಡಿಸಿದ ಕೇಂದ್ರಕ್ಕೆ ಹಾಜರಾಗಲು ವಿನೇಶ್ ಅವರಿಗೆ ಹೇಳಲಾಗಿತ್ತು, "ನನಗೆ ನಿರಾಶೆಯಾಗಿದೆ. ಆದರೆ ನನ್ನ ಕೈಯಲ್ಲಿ ಏನೂ ಇಲ್ಲ. ದೇವರ ಆಶಯ ಏನೇ ಇರಲಿ. ಕೆಲವು ದಿನಗಳ ನಂತರ ನಾನು ಮತ್ತೊಂದು ಟೆಸ್ಟ್ ಮಾಡಿಸಿಕೊಳ್ಳುತ್ತೇನೆ. ”ಎಂದು ವಿನೇಶ್ ಹೇಳಿದರು.

ವಿನೇಶ್ ಅವರು ಸೋನೆಪಥ್ ನಲ್ಲಿನ  ಖಾರ್ಖೋಡಾದಲ್ಲಿರುವ ತಮ್ಮ ಮನೆಯಲ್ಲಿ ತರಬೇತಿ ಪಡೆಯುತ್ತಿದ್ದರು ಮತ್ತು ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಲು ಲಖನೌಗೆ ಪ್ರಯಾಣಿಸಬೇಕಿದ್ದ ಅವರು ಈಗ ತಮ್ಮ ಪ್ರಯಾಣ ಮುಂದೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com