ನೂತನ ಕೃಷಿ ಕಾನೂನುಗಳು ರದ್ದಾಗದಿದ್ದರೆ ಖೇಲ್ ರತ್ನ ವಾಪಸ್: ಬಾಕ್ಸರ್ ವಿಜೇಂದರ್ ಸಿಂಗ್ 

ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸದಿದ್ದರೆ ಖೇಲ್ ರತ್ನ ಪ್ರಶಸ್ತಿ ವಾಪಸ್ ನೀಡುವುದಾಗಿ ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.
ವಿಜೇಂದರ್ ಸಿಂಗ್
ವಿಜೇಂದರ್ ಸಿಂಗ್

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸದಿದ್ದರೆ ಖೇಲ್ ರತ್ನ ಪ್ರಶಸ್ತಿ ವಾಪಸ್ ನೀಡುವುದಾಗಿ ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.

ಹರಿಯಾಣ- ದೆಹಲಿ ಗಡಿಯಾದ ಸಿಂಗುವಿನಲ್ಲಿ ಕಳೆದ 11 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸೇರಿ ಮಾತನಾಡಿದ ವಿಜೇಂದರ್ ಸಿಂಗ್,  ನಮ್ಮ ದೊಡ್ಡಣ್ಣ ಪಂಜಾಬ್ ಇಲ್ಲಿರುವುದರಿಂದ ಇಲ್ಲಿಗೆ ಬಂದಿದ್ದೇನೆ. ಸರ್ಕಾರವು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ, ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನವನ್ನು ವಾಪಸ್ ನೀಡುವುದಾಗಿ ತಿಳಿಸಿದರು.

ಕೃಷಿ ಕಾನೂನುಗಳ ಜಾರಿಗೆ ಬರುವ ಮುಂಚಿನಿಂದಲೂ ರೈತರ ಐಕ್ಯತೆ ಯಾವಾಗಲೂ ಇರುವುದಾಗಿ ಅವರು ಹೇಳಿದ್ದಾರೆ.
ಈ ನಡುವೆ ಮಾಜಿ ರಾಷ್ಟ್ರೀಯ ಬಾಕ್ಸಿಂಗ್ ತರಬೇತುದಾರ ಗುರ್ಬಾಕ್ಷ್ ಸಿಂಗ್ ಸಂಧು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ದ್ರೋಣಚಾರ್ಯ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com