ಉದಯೋನ್ಮುಖ ಅಥ್ಲೀಟ್ ಗಳಿಗಾಗಿ ಬೆಂಗಳೂರಿನ ಕ್ರೀಡಾ ಶಾಲೆಯಿಂದ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ

 ಉದಯೋನ್ಮುಖ ಅಥ್ಲೀಟ್ ಗಳಿಗಾಗಿ ಬೆಂಗಳೂರಿನ ಕ್ರೀಡಾ ಶಾಲೆಯಿಂದ ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಆಹ್ವಾನಿಸಲಾಗಿದೆ. 
ಉದಯೋನ್ಮುಖ ಅಥ್ಲೀಟ್ ಗಳಿಗಾಗಿ ಬೆಂಗಳೂರಿನ ಕ್ರೀಡಾ ಶಾಲೆಯಿಂದ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ

ಬೆಂಗಳೂರು: ಉದಯೋನ್ಮುಖ ಅಥ್ಲೀಟ್ ಗಳಿಗಾಗಿ ಬೆಂಗಳೂರಿನ ಕ್ರೀಡಾ ಶಾಲೆಯಿಂದ ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಆಹ್ವಾನಿಸಲಾಗಿದೆ. 

2021-22 ನೇ ಸಾಲಿನ ಯೋಜನೆಯಲ್ಲಿ, ಯು-12, ಯು-14, ಯು-16 ಶ್ರೇಣಿಯ ಸುಮಾರು 60 ಮಂದಿ ವಿದ್ಯಾರ್ಥಿಗಳಿಗೆ ಕ್ರಿಕೆಟ್, ಫುಟ್ಬಾಲ್, ಟೆನ್ನೀಸ್, ಬ್ಯಾಸ್ಕೆಟ್ ಬಾಲ್ ವಿಭಾಗಗಳಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಜನವರಿ ತಿಂಗಳಲ್ಲಿ ಇಂಟಿಗ್ರೇಟೆಡ್ ಸ್ಕೂಲ್ ಫಾರ್ ಸ್ಪೋರ್ಟ್ಸ್ ಹಾಗೂ ಅಕಾಡೆಮಿಕ್ಸ್ ನಲ್ಲಿ ನಡೆಯಲಿರುವ ಟ್ರಯಲ್ ಗಳ ನಂತರ ವಿದ್ಯಾರ್ಥಿವೇತನಕ್ಕೆ ಅರ್ಹ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ ಹಾಗೂ ಶೇ.25-100% ವರೆಗೂ ಅರ್ಹತೆಗೆ ತಕ್ಕಂತೆ ವಿದ್ಯಾರ್ಥಿ ವೇತನವನ್ನು ಕ್ರೀಡಾ ತರಬೇತಿ ಹಾಗೂ ಅಕಾಡೆಮಿಕ್ ಶುಲ್ಕ ಭರಿಸುವುದಕ್ಕೆ ನೀಡಲಾಗುತ್ತದೆ.

ಮೊದಲನೇ ಹಂತದ ವಿದ್ಯಾರ್ಥಿ ವೇತನ ಮೆರಿಟ್ ಆಧಾರದಲ್ಲಿ ಇತ್ತು. ಈ ಬಾರಿ ಅಭ್ಯರ್ಥಿಗಳು ಟ್ರಯಲ್ ನೀಡಲು ಅವಕಾಶ ಮಾಡಿಕೊಡುವುದಕ್ಕೆ ಆಡಳಿತ ಮಂಡಳಿಯ ಸದಸ್ಯರು ನಿರ್ಧರಿಸಿದ್ದಾರೆ ಎಂದು ಟಿಎಸ್ಎಸ್ ನ ನಿರ್ದೇಶಕ ಶಂಕರ್ ಯುವಿ ಹೇಳಿದ್ದಾರೆ.

ಟ್ರಯಲ್ ಗಳ ಜೊತೆಗೆ ಅಭ್ಯರ್ಥಿಗಳ ನಡವಳಿಕೆ, ಆಪ್ಟಿಟ್ಯೂಡ್, ಬದ್ಧತೆ, ಕ್ರೀಡಾ ಸಾಧನೆಗಳನ್ನೂ ವಿದ್ಯಾರ್ಥಿ ವೇತನಕ್ಕೆ ಪರಿಗಣಿಸಲಾಗುತ್ತದೆ. ಟಿಎಸ್ಎಸ್ ನ ಮುಖ್ಯ ತರಬೇತುದಾರರ ಪೈಕಿ ಓರ್ವರಾಗಿದ್ದ ಟೆನ್ನೀಸ್ ಸ್ಟಾರ್ ರೋಹನ್ ಬೋಪಣ್ಣ ಈ ಬಗ್ಗೆ ಮಾತನಾಡಿದ್ದು, "ನಾವು ಭವಿಷ್ಯಕ್ಕೆ ಉತ್ತಮವಾಗುವುದನ್ನು ಮಾಡಲು ಯತ್ನಿಸುತ್ತಿದ್ದೇವೆ.

ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಡಿ.28 ವರೆಗೆ ಅರ್ಜಿಗಳನ್ನು ಟಿಎಸ್ಎಸ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com