ಫುಟ್ಬಾಲ್​ ದಂತಕಥೆ ಪೀಲೆ ಸಾರ್ವಕಾಲಿಕ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ

ಜಾಗತಿಕ ಫುಟ್ ಬಾಲ್ ನ ದಂತಕಥೆ ಪೀಲೆ ಅವರ ಸಾರ್ವಕಾಲಿಕ ದಾಖಲೆಯನ್ನು ಬಾರ್ಸಿಲೋನಾ ಫುಟ್ ಬಾಲ್ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಮುರಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಜಾಗತಿಕ ಫುಟ್ ಬಾಲ್ ನ ದಂತಕಥೆ ಪೀಲೆ ಅವರ ಸಾರ್ವಕಾಲಿಕ ದಾಖಲೆಯನ್ನು ಬಾರ್ಸಿಲೋನಾ ಫುಟ್ ಬಾಲ್ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಮುರಿದಿದ್ದಾರೆ.

ಹೌದು.. ಲಿಯೋನೆಲ್ ಮೆಸ್ಸಿ ಮಂಗಳವಾರ ಬಾರ್ಸಿಲೋನಾ ಪರ ತಮ್ಮ 644ನೇ ಗೋಲು ಗಳಿಸುವ ಮೂಲಕ ಪೀಲೆ ಅವರ ಸಾರ್ವಕಾಲಿಕ ಗೋಲುಗಳ ಮೈಲಿಗಲ್ಲನ್ನು ಮುರಿದಿದ್ದಾರೆ. ವಲ್ಲಾಡೋಲಿಡ್‌ನಲ್ಲಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ 3-0 ಗೋಲುಗಳಿಂದ ಗೆಲ್ಲಲು ಸಹಾಯ ಮಾಡಿದ ಮೆಸ್ಸಿ,  ಶನಿವಾರ ಪೀಲೆ ಅವರು ಗಳಿಸಿದ್ದ ಸಾರ್ವಕಾಲಿಕ ದಾಖಲೆಯ ಗೋಲುಗಳನ್ನು ಸರಿಗಟ್ಟಿದ್ದರು. 1957-74ರವರೆಗೆ ಸ್ಯಾಂಟೋಸ್‌ ತಂಡಕ್ಕಾಗಿ ಪೀಲೆ ಅವರು 643 ಗೋಲುಗಳನ್ನು ಬಾರಿಸಿದ್ದರು. 2004 ರಂದು ಫುಟ್ಬಾಲ್​ ಜಗತ್ತಿಗೆ ಕಾಲಿರಿಸಿದ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಪರ ಆಡಿದ ಮೊದಲ  ಪಂದ್ಯದಿಂದ ಈ ವರೆಗೂ ತಮ್ಮ ವೃತ್ತಿಜೀವನದಲ್ಲಿ 644 ಗೋಲು ಗಳಿಸಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಭಾವನಾತ್ಮಕ ಸಂದೇಶ ಹಾಕಿ ತಮ್ಮ ಸಂತಸ ಹಂಚಿಕೊಂಡಿರುವ ಮೆಸ್ಸಿ, 'ನಾನು ಆಟವಾಡಲು ಪ್ರಾರಂಭಿಸಿದಾಗ ನಾನು ಈ ದಾಖಲೆಯನ್ನು ಮುರಿಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನನ್ನ ಸಾಧನೆಯ ಹಾದಿಯಲ್ಲಿ ನನಗೆ ಸಹಾಯ ಮಾಡಿದ ನನ್ನ ತಂಡದ ಸದಸ್ಯರು, ನನ್ನ  ಕುಟುಂಬ, ನನ್ನ ಸ್ನೇಹಿತರು ಮತ್ತು ಪ್ರತಿದಿನ ನನ್ನನ್ನು ಬೆಂಬಲಿಸುವ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com